ಮೈಸೂರು : ನಟನ ರಂಗಶಾಲೆಯ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಯೋಗದೊಂದಿಗೆ 2024-25ನೇ ಸಾಲಿನ ವಾರಾಂತ್ಯ ರಂಗ ಶಾಲೆಯ ಮಕ್ಕಳ ಅಭ್ಯಾಸಿ ಪ್ರಯೋಗದ ಪಯುಕ್ತ ದಿನಾಂಕ 22 ಮತ್ತು 23 ಫೆಬ್ರವರಿ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಶಾಲೆಯಲ್ಲಿ ‘ಮಕ್ಕಳ ಮಹಾಭಾರತ’ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಈ ನಾಟಕವು ಡಾ. ಪಿ.ಕೆ. ರಾಜಶೇಖರರವರ ಜನಪದ ಮಹಾಭಾರತ ಆಧಾರಿತವಾಗಿದ್ದು, ಇದರ ರಚನೆಯನ್ನು ರಂಗಾಯಣ ರಾಮನಾಥ ಇವರು ಮಾಡಿದ್ದು ಹಾಗೂ ಡಿ.ಸಿ. ಸುದರ್ಶನ್ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327 ಮತ್ತು 9845595505 ಸಂಪರ್ಕಿಸಿರಿ.