ಕಾಸರಗೋಡು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ, ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀಸ್ವಾಮೀಜಿಯವರ ನೇತೃತ್ವ ಹಾಗೂ ಅನುಗ್ರಹದೊಂದಿಗೆ ನಡೆಯುವ ಎಡನೀರು ಶ್ರೀ ವಿಷ್ಣುಮಂಗಲ ದೇವಾಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹಾಗೂ ನಾಟ್ಯರಂಗ ಎಡನೀರು ಶಾಖೆಯ ಮಕ್ಕಳ ವಾರ್ಷಿಕೋತ್ಸವ ಸಂಭ್ರಮದ ಪ್ರಯುಕ್ತ ‘ನೃತ್ಯ ಹರ್ಷ’ ಭರತನಾಟ್ಯ ಕಾರ್ಯಕ್ರಮವು ದಿನಾಂಕ 14 ಫೆಬ್ರವರಿ 2025ರಂದು ನಡೆಯಿತು.
ಶಾಸ್ತ್ರೀಯ ಭರತನಾಟ್ಯದ ರಂಗಪ್ರವೇಶ ಮಾಡುವ ಮೂಲಕ ಎಳೆಯ ಮಕ್ಕಳು ವೇದಿಕೆಯನ್ನೇರಿದರು. ಹಿಮ್ಮೇಳದಲ್ಲಿ ನೃತ್ಯನಿರ್ದೇಶನ ಮಾಡಿದ ಗುರು ವಿದುಷಿ ಮಂಜುಳಾ ಸುಬ್ರಹ್ಮಣ್ಯ ನಟುವಾಂಗ, ಗಾಯನದಲ್ಲಿ ಪವಿತ್ರ ವಿನಯ್ ಮಯ್ಯ, ಮೃದಂಗ ವಾದಕರಾಗಿ ಕೋವೈ ಕಣ್ಣನ್ ಕಾಂಞಂಗಾಡ್, ಕೊಳಲು ವಾದನದಲ್ಲಿ ಕೃಷ್ಣಗೋಪಾಲ ಪುತ್ತೂರು ಇವರುಗಳು ಸಹಕರಿಸಿದ್ದರು.