ಮಂಗಳೂರು : ಅವಿನಾಶ್ ಫೋಕ್ ಡಾನ್ಸ್ ಮಂಗಳೂರು (ರಿ.) ಅರ್ಪಿಸುವ 3ನೇ ವರ್ಷದ ‘ಕಲಾಯನ’ ಜಾನಪದ ಸಮೂಹ ನೃತ್ಯ ಸ್ಪರ್ಧೆಯನ್ನು ದಿನಾಂಕ 25 ಫೆಬ್ರವರಿ 2025ರಂದು ಬೆಳಿಗ್ಗೆ 8-00 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9980358774.
ಸ್ಪರ್ಧೆಯ ನಿಯಮಗಳು :
* ಹತ್ತು ಜನ ನೃತ್ಯಗಾರರು ಕಡ್ಡಾಯವಾಗಿ ವೇದಿಕೆಯಲ್ಲಿರತಕ್ಕದ್ದು.
* ಐದು ಜನ ಹಿಮ್ಮೇಳದವರಿಗೆ ಮಾತ್ರ ಅವಕಾಶ.
* ಸಮೂಹ ನೃತ್ಯ 10 ನಿಮಿಷದ್ದಾಗಿರುತ್ತದೆ.
* ವಯಸ್ಸು ಮಿತಿ ಇರುವುದಿಲ್ಲ.
* ಸಿ.ಡಿ. ಹಾಡಿಗೆ ಅವಕಾಶವಿದೆ.
* ಕುಣಿತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು.
* ಹಿನ್ನಲೆಯನ್ನು ತೀರ್ಪುಗಾರರಿಗೆ ಮುಂಚಿತವಾಗಿ ನೀಡಬೇಕು.
* ಸ್ಪರ್ಧೆಯಲ್ಲಿ ನೀರು, ಬೆಂಕಿ ಮತ್ತು ಸ್ಫೋಟಕ ಬಳಕೆ ನಿಷೇಧಿಸಲಾಗಿದೆ.
* ಅಶ್ಲೀಲ ಅಸಂಬದ್ಧ ಅಥವಾ ಜಾತಿ ಧರ್ಮಗಳ ಅವಹೇಳನಕ್ಕೆ ಅವಕಾಶ ಇರುವುದಿಲ್ಲ.
* ಕಡ್ಡಾಯವಾಗಿ ದೈವಗಳ ಪಾತ್ರಕ್ಕೆ ಅವಕಾಶವಿಲ್ಲ.
* ಮುಕ್ತ ವಿಭಾಗದ ಸ್ಪರ್ಧೆ.
* ತಂಡಗಳು ನಿಮಗೆ ನಿಗದಿಪಡಿಸಿದ ಸಮಯದಲ್ಲಿಯೇ ಪ್ರದರ್ಶನ ನೀಡಬೇಕು. ಯಾವುದೇ ಕಾರಣಕ್ಕೂ ಬದಲಾವಣೆಗೆ ಅವಕಾಶ ಇರುವುದಿಲ್ಲ.
* ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ.