ಸುರತ್ಕಲ್ : ಆರೋಹಣಂ ಸ್ಕೂಲ್ ಆಫ್ ಮ್ಯೂಜಿಕ್ ಇದರ 10ನೇ ವಾರ್ಷಿಕೋತ್ಸವ ಪ್ರಯುಕ್ತ ‘ದಶಕ ಸಮರ್ಪಣಂ’ ಎರಡನೇ ಸರಣಿಯು ದಿನಾಂಕ 23 ಫೆಬ್ರವರಿ 2025ರಂದು ಸಂಜೆ 5-30 ಗಂಟೆಗೆ ಸುರತ್ಕಲ್ ಕೆನರಾ ಬ್ಯಾಂಕ್ ಕ್ರಾಸ್ ರೋಡ್, ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ನಡೆಯಲಿದೆ.
ಮಣಿ ಕೃಷ್ಣಸ್ವಾಮಿ ಅಕಾಡಮಿ (ರಿ.) ಸುರತ್ಕಲ್ ಇದರ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ‘ಕೊಳಲು ವಾದನ ಕಚೇರಿ’ ಪ್ರಸ್ತುತಗೊಳ್ಳಲಿದೆ. ಬೆಂಗಳೂರಿನ ಶ್ರೀ ದೀಪಕ್ ಹೆಬ್ಬಾರ್ ಇವರ ಕೊಳಲು ವಾದನಕ್ಕೆ ಶ್ರೀ ನವನೀತ ಕೃಷ್ಣನ್ ವಯೋಲಿನ್ ಮತ್ತು ಶ್ರೀ ಅವಿನಾಶ್ ಬಿ. ಮೃದಂಗಂನಲ್ಲಿ ಸಾಥ್ ನೀಡಲಿದ್ದಾರೆ.