ಉಪ್ಪುಂದ : ಶ್ರೀ ಶ್ರೀನಿವಾಸ್ ಅಕ್ಕಿಅಂಗಡಿ ಸದ್ಭವನಾ ವೇದಿಕೆ ಚರ್ಚ್ ರೋಡ್ ಪಡುವರಿ ಬೈಂದೂರು ಮತ್ತು ಕುಂದ ಅಧ್ಯಯನ ಕೇಂದ್ರ (ರಿ.) ಶಂಕರ ಕಲಾ ಮಂದಿರ ಉಪ್ಪುಂದ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀಮತಿ ಸೀತಾ ಶ್ರೀನಿವಾಸ ಇವರ ಸ್ವರಚಿತ ಕವನ ಸಂಕಲನ ‘ಅಮ್ಮ ಹಚ್ಚಿದ ಹಣತೆ’ ಕೃತಿ ಅನಾವರಣವನ್ನು ದಿನಾಂಕ 21 ಫೆಬ್ರವರಿ 2025ರಂದು ಅಪರಾಹ್ನ 4-00 ಗಂಟೆಗೆ ಉಪ್ಪುಂದ ಶಂಕರ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಪೂರ್ವಾಧ್ಯಕ್ಷರಾದ ಉಪ್ಪುಂದ ಚಂದ್ರಶೇಖರ ಹೊಳ್ಳ ಇವರು ಸಭಾಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಶ್ರೀಮತಿ ವರಮಹಾಲಕ್ಷ್ಮೀ ಹೊಳ್ಳ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಶ್ರೀರಾಮ ಟ್ರಸ್ಟ್ ಅಧ್ಯಕ್ಷರಾದ ರಾಮಕೃಷ್ಣ ಶೇರುಗಾರ್ ಬಿಜೂರು ಇವರು ಕೃತಿ ಅನಾವರಣ ಮಾಡಲಿದ್ದು, ಕ.ಸಾ.ಪ. ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾದ ಅರುಣ ಕುಮಾರ್ ಇವರು ಶುಭಶಂಸನೆ ಮತ್ತು ಸಾಹಿತಿ ಮಂಜುನಾಥ ಮರವಂತೆ ಇವರು ಪುಸ್ತಕ ಪರಿಚಯ ಮಾಡಲಿದ್ದಾರೆ.