ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥೆಯು ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆಯ ಮಂಗಳ ಸಭಾಂಗಣದಲ್ಲಿ ದಿನಾಂಕ 21 ಮತ್ತು 22 ಫೆಬ್ರವರಿ 2025ರಂದು ನಡೆಯಲಿರುವ 27ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಧನಂಜಯ ಮೂಡುಬಿದಿರೆ ಇವರನ್ನು ಸನ್ಮಾನಿಸಲಿದೆ.
ಬಿ. ಎಸ್. ಸಿ. ಪದವಿ ಹಾಗೂ ಫ್ರೆಂಚ್ ಪ್ರೈಮರಿ ಪದವಿ ಗಳಿಸಿರುವ ಧನಂಜಯ ಮೂಡುಬಿದಿರ 37 ವರ್ಷಗಳ ಕಾಲ ‘ಹೊಸದಿಗಂತ’, ‘ಮುಂಗಾರು’, ‘ಕನ್ನಡ ಜನಾಂತರಂಗ’, ‘ಜನ ಈದಿನ’ ಮತ್ತು ‘ಉದಯವಾಣಿ’ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಕೊಪ್ಪಳ ಮತ್ತು ಮಂಡ್ಯದಲ್ಲಿ 90ರ ದಶಕದಲ್ಲಿ ನಡೆದಿದ್ದ ಅ. ಭಾ. ಕನ್ನಡ ಸಾಹಿತ್ಯ ಸಮ್ಮೇಳನ, ಮೂಡುಬಿದಿರೆಯಲ್ಲಿ ನಡೆದಿದ್ದ 71ನೇ ಅ. ಭಾ. ಕ. ಸಾಹಿತ್ಯ ಸಮ್ಮೇಳನ, ಬೆಳಗಾವಿ, ಮಂಗಳೂರು ಮೊದಲಾದೆಡೆ ನಡೆದಿದ್ದ ಅ. ಭಾ. ಕ. ಸಾ. ಸಮ್ಮೇಳನಗಳಲ್ಲಿ ಭಾಗಿಯಾಗಿ ಸಮಗ್ರ ವರದಿ ಪ್ರಕಟಿಸಿದ್ದಾರೆ.
ಸಾಹಿತ್ಯದಲ್ಲೂ ಆಸಕ್ತಿ ಹೊಂದಿರುವ ಇವರ ಬರವಣಿಗೆಯ ಕವನ, ಕಥೆ, ಹಾಸ್ಯ, ವ್ಯಕ್ತಿ/ಸ್ಥಳ ಪರಿಚಯ, ರಂಗ ವಿಮರ್ಶೆ, ಕಲಾವಿದರ ಸಂದರ್ಶನ, ಪರಿಚಯ ಇತ್ಯಾದಿ ಹಲವಾರು ಪತ್ರಿಕೆಗಳಲ್ಲಿ ಪ್ರಕತಗೊಂಡಿವೆ. ‘ಸಾಕ್ರೆಟೀಸನ ಉರುಳು’ ಎಂದ ಪುಟ್ಟ ನಾಟಕ ಕೃತಿ ರಚಿಸಿರುವ ಇವರು ನವಸಾಕ್ಷರರಿಗಾಗಿ `ತುಳು ನಾಡ ಸಿರಿ’ ಎಂಬ ಪುಟ್ಟ ಕೃತ, ಆಧುನಿಕ ಆಹಾರ ಪದ್ಧತಿಯ ಅಪಾಯಗಳ ಕುರಿತಾದ ‘ಆಹಾರ-ಪೂರಕ, ಮಾರಕ’ ಕೃತಿಗಳನ್ನು ರಚಿಸಿದ್ದಾರೆ. ಬೇಲಾಡಿ, ಎಡಪದವು ಮೊದಲಾದೆಡೆ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸ್ವರಚಿತ ಕವನ ವಾಚನ ಮಾಡಿದ್ದಾರೆ.
ಇವರ ಪತ್ರಿಕಾ ರಂಗದ ಸೇವೆಗಾಗಿ ‘ರಾಜ್ಯಮಟ್ಟದ ಹೂಗಾರ್ ಮಾಧ್ಯಮ ಪ್ರಶಸ್ತಿ’ ಜೋತಗೆ ಮೂಡುಬಿದಿರೆ, ಕಾರ್ಕಳ, ಹೆಬ್ರಿ ಮೊದಲಾದೆಡೆ ವಿವಿಧ ಸಂಘಸಂಸ್ಥೆಗಳಿಂದ ಪತ್ರ ಸಹಿತ ಸಮ್ಮಾನ ಸಂದಿವೆ.
Subscribe to Updates
Get the latest creative news from FooBar about art, design and business.
ಪತ್ರಕರ್ತ ಧನಂಜಯ ಮೂಡುಬಿದಿರೆ ಇವರೆಗೆ ದ. ಕ. ಜಿಲ್ಲಾ ಕ. ಸಾ. ಪ ದಿಂದ ಗೌರವ ಸನ್ಮಾನ
No Comments1 Min Read