ಬೆಂಗಳೂರು : ಬಿ.ಎಂ.ಶ್ರೀ ಪ್ರತಿಷ್ಠಾನ (ರಿ.) ಮತ್ತು ಲೇಖಿಕಾ ಸಾಹಿತ್ಯ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ‘ವಾಣಿ ಸ್ಮರಣೆ’ ಒಂದು ಸ್ಮರಣೀಯ ಕಾರ್ಯಕ್ರಮವನ್ನು ದಿನಾಂಕ 25 ಫೆಬ್ರವರಿ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರಿನ ಬಿ.ಎಂ.ಶ್ರೀ ಕಲಾಭವನ ಎಂ.ವಿ.ಸೀ. ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಎಂ.ಶ್ರೀ ಪ್ರತಿಷ್ಠಾನದ ಕಾರ್ಯದರ್ಶಿಯಾದ ಡಾ. ಶಾಂತರಾಜು ಇವರು ವಹಿಸಲಿದ್ದು, ಲೇಖಕಿ ಶ್ರೀಮತಿ ಶೈಲಜಾ ಸುರೇಶ್ ಇವರು ಉದ್ಘಾಟನೆ ಮಾಡಲಿದ್ದಾರೆ. ಹಿರಿಯ ಲೇಖಕರಾದ ಡಾ. ಮಂಗಳ ಪ್ರಿಯದರ್ಶಿನಿ ಡಿ. ಇವರು ‘ವಾಣಿ ಸ್ಮರಣೆ’ಗೈಯ್ಯಲಿದ್ದು, ಪುತ್ತೂರಿನ ಹಿರಿಯ ಲೇಖಕಿ, ಸಾಧಕಿ ಶ್ರೀಮತಿ ಎ.ಪಿ. ಮಾಲತಿ ಇವರಿಗೆ ಸಾವಿತ್ರಮ್ಮ ಅಪ್ಪಯ್ಯ ಹಿರಿಯ ಸಾಧಕಿ ಪ್ರಶಸ್ತಿ 2024 ಪ್ರದಾನ ಮಾಡಲಾಗುವುದು.
ವಾಣಿ ಕೌಟುಂಬಿಕ ಕಥಾಸ್ಪರ್ಧೆ-2025 ವಿಜೇತರು –
‘ಸೋತು ಗೆದ್ದವಳು’ – ಸುಹಾಸಿನಿ ಹೆಗಡೆ, ಮೂರೂರು
‘ತಪ್ಪೊಂದ ಹೇಳುವೆ !’ – ಸ್ವರ್ಣಗೌರಿ ಎಸ್. ಕಳಾಸಪುರ
‘ಅಮ್ಮನಾಗುವುದೆಂದರೆ’ – ಕಲ್ಪನಾ ಹೆಗಡೆ
‘ಆತಂಕ’ – ರಮೇಶ್ ಗೋನಾಳ್
‘ಸಂಪತ್ತು’ – ಸಂಜಯ್ ಪಾಟೀಲ್
‘ಕೊರಡು ಕೊನರಿದೊಡೆ’ – ಅಕ್ಷತಾ ರಾಜ್ ಪೆರ್ಲ
‘ಬಾಣಲೆಯಿಂದ’ – ಡಾ. ಸರಸ್ವತಿ ಕುಮಾರಿ ಕೆ.
‘ಕಾನನದಲ್ಲೊಂದು ದಿನ’ – ರೂಪ ಬಿ.ಎನ್.
‘ಹಳೆ ಮುತ್ತೈದೆಯ ಹಲವು ಪ್ರಸಂಗಗಳು’ – ಸುವ್ರತಾ ಅಡಿಗ
‘ದೇವರ ಕಣ್ಣೀರು’ – ವಿದ್ಯಾಧರ ಮುತಾಲಿಕ್ ದೇಸಾಯಿ