ಬೆಂಗಳೂರು : ವಿಶ್ವ ಕನ್ನಡ ಆರನೇ ರಾಜ್ಯಮಟ್ಟದ ಕವಿಗಳ ಕವಿಗೋಷ್ಠಿ ಸಮ್ಮೇಳನವು ದಿನಾಂಕ 23 ಫೆಬ್ರವರಿ 2025ರಂದು ಬೆಂಗಳೂರಿನಲ್ಲಿ ಜರುಗಲಿದೆ. ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣಿತ ದಾಖಲೆಯ ಕವಿಗೋಷ್ಠಿ ಇದು. ಸಾಹಿತ್ಯ, ಸಂಸ್ಕೃತಿ, ಜಾಗೃತಿ ಆಶಯ ಹೊಂದಿದ ವಿಶ್ವ ಕನ್ನಡ ಕಲಾ ಸಂಸ್ಥೆ (ರಿ.) ಇದನ್ನು ಆಯೋಜಿಸಿದ್ದಾರೆ.
ಈ ಕವಿಗೋಷ್ಠಿಯ ಭಾಗವಾಗಿ ದ.ರಾ. ಬೇಂದ್ರೆ ವೇದಿಕೆಯಲ್ಲಿ ನಡೆಯುವ ಗೋಷ್ಠಿಯ ಅಧ್ಯಕ್ಷತೆಗೆ ಮಂಗಳೂರಿನ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಇವರು ಆಯ್ಕೆಯಾಗಿದ್ದಾರೆ. ಡಾ. ಕೊಳ್ಚಪ್ಪೆ ಗೋವಿಂದ ಭಟ್ ಮೂಲತ: ಗಡಿನಾಡು ಕಾಸರಗೋಡಿನಲ್ಲಿ ಹುಟ್ಟಿ ಬೆಳೆದವರು. ಇವರ ಓದು ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್. ಬ್ಯಾಂಕಿನಲ್ಲಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮೂರು ಕಥಾಸಂಕಲನಗಳು ಪ್ರಕಟವಾಗಿದ್ದು, ‘ನೆಲಸಂಪಿಗೆ’ ಕಥಾಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಮಾಡುವ ‘ಶ್ರೀ ಕೆ. ವಾಸದೇವಾಚಾರ್ ದತ್ತಿ ಪ್ರಶಸ್ತಿ’ ದೊರಕಿದೆ.