29-03-2023, ಕಲಬುರಗಿ: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದಿಂದ ಬಿಡುಗಡೆಗೊಂಡ 115 ಕೃತಿಗಳಲ್ಲಿ ಅಕ್ಷತಾ ರಾಜ್ ಪೆರ್ಲ ಅವರ “ ಪರಿಧಿಯಾಚೆ ”
ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಹಾಗೂ ಬಸವ ಪ್ರಕಾಶನ ಕಲಬುರಗಿ ಇವರು 46ನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ಆಹ್ವಾನಿಸಿದ್ದ ವಿವಿಧ ಸಾಹಿತ್ಯ ಕೃತಿಗಳ ಹಸ್ತಪ್ರತಿ ಆಯ್ಕೆಯಲ್ಲಿ ಅಕ್ಷತಾ ರಾಜ್ ಪೆರ್ಲ ಅವರ ಪರಿಧಿಯಾಚೆ ಅನುವಾದಿತ ನಾಟಕದ ಹಸ್ತಪ್ರತಿ ಆಯ್ಕೆಯಾಗಿದ್ದು ಕೃತಿ ಬಿಡುಗಡೆ ಸಮಾರಂಭ ಮಾರ್ಚ್ 25ರಂದು ಕಲಬುರಗಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಟ್ಟು ಸತ್ಯನಾರಾಯಣ ಉದ್ಘಾಟಿಸಿದರು. ಹಿರಿಯ ಸಾಹಿತಿಗಳಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಕೃತಿ ಬಿಡುಗಡೆ ಮಾಡಿದ್ದು ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು. ಸಾಹಿತ್ಯದ ವಿವಿಧ ಪ್ರಕಾರಗಳ 115 ಕೃತಿಗಳ ಸಹಿತ ಪಠ್ಯಪುಸ್ತಕಗಳ ಲೋಕಾರ್ಪಣೆಯೂ ಈ ಸಂದರ್ಭದಲ್ಲಿ ನಡೆದಿದ್ದು ಸಿದ್ಧಲಿಂಗೇಶ್ವರ ಪ್ರಕಾಶನದ ಬಸವರಾಜ.ಜೀ.ಕೊನೇಕರಿಗೆ ಗೌರವಾರ್ಪಣೆ ಹಾಗೂ ಪುಸ್ತಕ ಪ್ರಕಟಣೆ ಸಲಹಾ ಸಮಿತಿಯ ಸದಸ್ಯರಿಗೆ ಸಂಮಾನ ಮಾಡಿದರು.
ಪರಿಧಿಯಾಚೆ ಮೂಲತ: ಸಾಪೊದ ಕಣ್ಣ್ ಎಂಬ ತುಳು ನಾಟಕದ ಅನುವಾದ ರೂಪವಾಗಿದ್ದು 2020ರ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ತುಳು ನಾಟಕ ಹಸ್ತಪ್ರತಿ ಸ್ಪರ್ಧೆಯ ವಿಜೇತ ಕೃತಿ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ನಾಟಕ ಕೃತಿ ವಿಭಾಗದ ಬಹುಮಾನಿತ ಕೃತಿಯಾಗಿದೆ.
ಅಕ್ಷತಾ ರಾಜ್ ಪರ್ಲ