ಉಡುಪಿ : ಸುಮನಸಾ ಕೊಡವೂರು ಉಡುಪಿ (ರಿ.) ಇದರ ವತಿಯಿಂದ ‘ರಂಗಹಬ್ಬ 13’ ಸಮಾರಂಭವನ್ನು ದಿನಾಂಕ 23 ಫೆಬ್ರವರಿ 2025ರಿಂದ 01 ಮಾರ್ಚ್ 2025ರವರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಉಡುಪಿ ಅಜ್ಜರಕಾಡು ಭುಜಂಗ ಪಾರ್ಕ್ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 23 ಫೆಬ್ರವರಿ 2025ರಂದು ಶ್ರೀಜಿತ್ ಸುಂದರಂ ಇವರ ನಿರ್ದೇಶನದಲ್ಲಿ ಬೆಂಗಳೂರಿನ ಪಯಣ ತಂಡದವರು ‘ತಲ್ಕಿ’, ದಿನಾಂಕ 24 ಫೆಬ್ರವರಿ 2025ರಂದು ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ಸುಮನಸಾ ಕೊಡವೂರು ತಂಡದವರು ‘ಗೊಂದಿ’, 25 ಫೆಬ್ರವರಿ 2025ರಂದು ದಿ. ಕೆ. ಸಾಣ್ಣೇಗೌಡ ಇವರ ನಿರ್ದೇಶನದಲ್ಲಿ ಹಾಸನದ ಅನಿಕೇತನ (ರಿ.) ಇವರು ‘ಕಿರಗೊರಿನ ಗಯ್ಯಾಳಿಗಳು’, 26 ಫೆಬ್ರವರಿ 2025ರಂದು ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ಸುಮನಸಾ ಕೊಡವೂರು ತಂಡದವರು ‘ಈದಿ’, 27 ಫೆಬ್ರವರಿ 2025ರಂದು ಮಹಾದೇವ ಹಡಪದ ಇವರ ನಿರ್ದೇಶನದಲ್ಲಿ ಧಾರವಾಡದ ಆಟಮಾಟ (ರಿ.) ತಂಡದವರು ‘ಗುಡಿಯ ನೋಡಿರಣ್ಣ’, 28 ಫೆಬ್ರವರಿ 2025ರಂದು ಪ್ರಸಾದ್ ಮುದ್ರಾಡಿ ಇವರ ನಿರ್ದೇಶನದಲ್ಲಿ ಸುಮನಸಾ ಕೊಡವೂರು ತಂಡದವರು ‘ವಿದ್ಯುನ್ಮತಿ ಕಲ್ಯಾಣ’, 01 ಮಾರ್ಚ್ 2025ರಂದು ಮಹೇಶ್ ದತ್ತಾನಿ ಇವರ ನಿರ್ದೇಶನದಲ್ಲಿ ಉಡುಪಿಯ ಪುನಹ ಥೆಯೇಟರ್ ತಂಡದವರು ‘ಯೋಗಿ ಮತ್ತು ಬೋಗಿ’ ನಾಟಕ ಪ್ರದರ್ಶನ ನೀಡಲಿದ್ದಾರೆ.