ಕೋಲಾರ : ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಲಾರ ಇವರ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆಯಡಿ ರಾಜ್ಯಮಟ್ಟದ ‘ಜನಪರ ಉತ್ಸವ -2025’ವನ್ನು ದಿನಾಂಕ 24 ಮತ್ತು 25 ಫೆಬ್ರವರಿ 2025ರಂದು ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 24 ಫೆಬ್ರವರಿ 2025ರಂದು ಕೋಲಾರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಮಧ್ಯಾಹ್ನ 3-00 ಗಂಟೆಗೆ ರಾಜ್ಯ ಮಟ್ಟದ ಕವಿಗೋಷ್ಠಿ, ಹಾಡು ಹುಟ್ಟಿದ ಗಳಿಗೆ ಮಕ್ಕಳ ರಂಗ ರೂಪಕ ಪ್ರಸ್ತುತಗೊಳ್ಳಲಿದೆ. 5-30 ಗಂಟೆಗೆ ಕೋಲಾರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜನಪರ, ಜನಪದ ಮತ್ತು ಗೀತ ಗಾಯನ ಸಂಭ್ರಮದಲ್ಲಿ ಜನಪದ, ಸುಗಮ ಸಂಗೀತ, ವಚನ, ತತ್ವಪದ, ರಂಗ ಸಂಗೀತ, ನೃತ್ಯ ರೂಪಕ, ನೃತ್ಯ ಪ್ರದರ್ಶನ, ವಾದ್ಯ ಸಂಗೀತ ಮತ್ತು ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 25 ಫೆಬ್ರವರಿ 2025ರಂದು ಕೋಲಾರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಬೆಳಿಗ್ಗೆ 11-00 ಗಂಟೆಗೆ ‘ಸಮಕಾಲೀನ ಸಂದರ್ಭದಲ್ಲಿ ದಲಿತ ಸಮುದಾಯದ ಮುಂದಿರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ತಲ್ಲಣಗಳು’ ಎಂಬ ವಿಷಯದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ, 3-00 ಗಂಟೆಗೆ ಜನಪರ ಗಾಯನ, ಸಂಜೆ 6-00 ಗಂಟೆಗೆ ಕೋಲಾರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜನಪರ, ಜನಪದ ಮತ್ತು ಗೀತ ಗಾಯನ ಸಂಭ್ರಮದಲ್ಲಿ ಜನಪದ, ಸುಗಮ ಸಂಗೀತ, ವಚನ, ತತ್ವಪದ, ರಂಗ ಸಂಗೀತ, ರಾಜ್ಯದ ವಿವಿಧ ಜನಪದ ಕಲಾ ತಂಡಗಳಿಂದ ಜನಪದ ನಾದಧ್ವನಿ ಪ್ರಸ್ತುತಗೊಳ್ಳಲಿದೆ.