ಮಡಿಕೇರಿ : ಕರ್ನಾಟಕ ಜಾನಪದ ಅಕಾಡೆಮಿ ಮತ್ತು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ‘ಕೊಡಗು ಜಾನಪದ ಬೆಡಗು-ಜಾನಪದ ನಡೆ ವಿದ್ಯಾರ್ಥಿಗಳ ಕಡೆ’ ಎನ್ನುವ ವಿಶಿಷ್ಟ ಕಾರ್ಯಕ್ರಮ ದಿನಾಂಕ 24 ಫೆಬ್ರವರಿ 2025 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ. ಕಾವೇರಿ ಪ್ರಕಾಶ್ ಮಾತನಾಡಿ “ಜಾನಪದ ಎನ್ನುವುದು ಸಾಹಿತ್ಯದ ಮೂಲಬೇರು. ಇಂತಹ ಅಮೂಲ್ಯ ಜಾನಪದ ಸಂಸ್ಕೃತಿ ಪರಂಪರೆಗಳು ತಲೆತಲಾಂತರಗಳಿಂದ ಹರಿದು ಬಂದಿದ್ದು, ಇದನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿನವಾಗಿದೆ. ಅಂದು ಬೆಳಗ್ಗೆ ಘಂಟೆ 10.30ಕ್ಕೆ ‘ಕೊಡಗು ಜಾನವದ ಬೆಡಗು’ ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವ ಪ್ರಸಾದ್ ಅವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ವೆಂಕಟೇಶ ಪ್ರನನ್ನ ಪಿ. ಕೆ. ವಹಿಸಲಿದ್ದಾರೆ” ಎಂದು ಹೇಳಿದರು.
ಕಾರ್ಯಕ್ರಮದ ಸಹ ಸಂಚಾಲಕರು ಹಾಗೂ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಮೋಹನ್ ಕುಮಾರ್ ಮಾತನಾಡಿ “ಕಾರ್ಯಕ್ರಮದಲ್ಲಿ ‘ಕೊಡಗಿನ ಸಾಂಪ್ರದಾಯಿತ ಊಟೋಪಚಾರಗಳು’ ವಿಷಯದ ಕುರಿತು ಡಾ. ಕಾವೇರಿ ಪ್ರಕಾಶ್ ಮತ್ತು ‘ಬುಡಕಟ್ಟು ಸಂಸ್ಕೃತಿಯಲ್ಲಿ ಕುಡಿಯರು’ ವಿಷಯದ ಕುರಿತು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಅವರು ವಿಷಯ ಮಂಡನೆ ಮಾಡಲಿದ್ದಾರೆ. ಅತಿಥಿಗಳಾಗಿ ಐಕ್ಯೂಎಸಿ ಸಂಚಾಲಕರಾದ ಡಾ. ನಿರ್ಮಲ ಕೆ. ಡಿ., ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ಅಂಬೇಕಲ್ ನವೀನ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾನಕ ಡಾ.ಮೋಹನ್ ಕುಮಾರ್, ಜಾನಪದ ಅಕಾಡೆಮಿಯ ಸದಸ್ಯ ಸಂಚಾಲಕರಾದ ಡಾ. ಮೈನೂರು ಉಮೇಶ್ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಕಣ್ಣೀರ ತುಳಸಿ ಮೋಹನ್ ತಂಡದಿಂದ ಸುಗ್ಗಿ ಕುಣಿತ, ವಿಷ್ಣು ಪ್ರಿಯ ಮತ್ತು ತಂಡದಿಂದ ಕೊಡವ ಜಾನಪದ ನೃತ್ಯ, ಕುಡಿಯರ ಮುತ್ತಪ್ಪ ತಂಡದಿಂದ ದುಡಿಕೊಟ್ಸ್ ಪಾಟ್ ಪ್ರದರ್ಶನಗೊಳ್ಳಲಿದೆ” ಎಂದು ತಿಳಿಸಿದರು.