ಮಳವಳ್ಳಿ : ರಂಗಬಂಡಿ ಮಳವಳ್ಳಿ (ರಿ.) ಆಯೋಜಿಸುವ 2 ತಿಂಗಳ ರಂಗ ತರಬೇತಿ ಶಿಬಿರ ಮತ್ತು ನಾಟಕ ಪ್ರದರ್ಶನವು ದಿನಾಂಕ 10 ಮಾರ್ಚ್ 2025ರಂದು 01 ಮೇ 2025ರವರೆಗೆ ಮಳವಳ್ಳಿಯ ಬಿ.ಆರ್. ಅಂಬೇಡ್ಕರ್ ಭವನದ ಹಿಂಬಾಗದಲ್ಲಿರುವ ಸಿದ್ಧಾರ್ಥ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ನುರಿತ ತಜ್ಞರಿಂದ ತರಬೇತಿ ನೀಡಲಾಗುವುದು. ಶಿಬಿರದಲ್ಲಿ ಅಭಿನಯ, ದೇಹ ಚಲನೆ, ಧ್ವನಿಯ ಕುರಿತ ವ್ಯಾಯಾಮಗಳು, ಪ್ರಸಾಧನ, ಬೆಳಕಿನ ವಿನ್ಯಾಸ, ರಂಗ ಸಜ್ಜಿಕೆ, ಪರಿಕರಗಳ ತಯಾರಿ, ವಸ್ತ್ರ ವಿನ್ಯಾಸದ ಬಗ್ಗೆ ಮಾಹಿತಿ ನೀಡಲಾಗುವುದು. ಮಧು ಮಳವಳ್ಳಿ ಶಿಬಿರದ ನಿರ್ದೇಶಕರಾಗಿದ್ದು, ಭರತ್ ರಾಜ್ ಎನ್.ಎಲ್. ಸಹಕಾರದೊಂದಿಗೆ ನಡೆಯುವ ಈ ಶಿಬಿರದ ಹೆಚ್ಚಿನ ಮಾಹಿತಿಗಾಗಿ 7022940964 ಮತ್ತು 9448739907 ಸಂಖ್ಯೆಯನ್ನು ಸಂಪರ್ಕಿಸಿರಿ.