ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಅರ್ಪಿಸುವ ‘ನರ್ತನಾವರ್ತನ’ ಭರತನಾಟ್ಯ ಕಾರ್ಯಕ್ರಮವನ್ನು ದಿನಾಂಕ 02 ಮಾರ್ಚ್ 2025ರಂದು ಸಂಜೆ 5-00 ಗಂಟೆಗೆ ಪುತ್ತೂರಿನ ಜೈನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತರಾದ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದು, ಪುತ್ತೂರಿನ ವಿವೇಕಾನಂದ ಮಹಾ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ ಇವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಂಗಳೂರಿನ ಹಿರಿಯ ಪತ್ರಿಕಾ ಛಾಯಾ ಚಿತ್ರಕಾರರಾದ ಶ್ರೀ ಯಜ್ಞ ಇವರಿಗೆ ‘ಕಲಾಶ್ರಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಮುಂಬೈಯ ಶ್ರೀಮತಿ ಮೀರಾ ಶ್ರೀನಾರಾಯಣನ್ ಇವರು ಭರತನಾಟ್ಯ ಪ್ರಸ್ತುತಿ ನೀಡಲಿದ್ದು, ಹಾಡುಗಾರಿಕೆಯಲ್ಲಿ ಶ್ರೀ ಬೀಜೇಶ್ ಕೃಷ್ಣ, ನಟುವಾಂಗದಲ್ಲಿ ಶ್ರೀಮತಿ ಶ್ರೀಲತಾ ಆಚಾರ್ಯ ಮೃದಂಗದಲ್ಲಿ ಶ್ರೀ ಚಾರುದತ್ತ್ ವಿ.ವಿ. ಮತ್ತು ಕೊಳಲಿನಲ್ಲಿ ಶ್ರೀ ಹರಿಪ್ರಸಾದ್ ಇವರು ಸಹಕರಿಸಲಿದ್ದಾರೆ.