ಮೇಲುಕೋಟೆ : ದೃಶ್ಯ ಟ್ರಸ್ಟ್ (ರಿ.) ಮೇಲುಕೋಟೆ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ, ಪು.ತಿ.ನ. ಟ್ರಸ್ಟ್ (ರಿ.) ಮೇಲುಕೋಟೆ ಮತ್ತು ಕರ್ನಾಟಕ ಸಂಘ ಮಂಡ್ಯ ಇವರ ಸಹಯೋಗದೊಂದಿಗೆ ದಿ. ಸುಘೋಷ ಕೌಲಗಿರವರ ಸವಿ ನೆನಪಿಗಾಗಿ ಆಯೋಜಿಸುವ ‘ಸುಗ್ಗಿ ಮಕ್ಕಳ ನಾಟಕೋತ್ಸವ -2025’ವನ್ನು ದಿನಾಂಕ 01 ಮತ್ತು 02 ಮಾರ್ಚ್ 2025ರಂದು ಸಂಜೆ 7-00 ಗಂಟೆಗೆ ಮೇಲುಕೋಟೆ ಪು.ತಿ.ನ. ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 01 ಮಾರ್ಚ್ 2025ರಂದು ಸದ್ವಿದ್ಯಾ ರಂಗತಂಡ ಮಂಡ್ಯ ಇವರು ಕುವೆಂಪು ರಚಿಸಿರುವ ಬೊಮ್ಮನಹಳ್ಳಿಯ ಕಿಂದರಿ ಜೋಗಿ ನಾಟಕ ಪ್ರದರ್ಶನ ನೀಡಲಿದ್ದಾರೆ. ಈ ನಾಟಕಕ್ಕೆ ದಿಗ್ವಿಜಯ ಹೆಗ್ಗೋಡು ಇವರು ಸಂಗೀತ ನೀಡಿದ್ದು, ಅಜಯ್ ನೀನಾಸಂ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ.
ದಿನಾಂಕ 02 ಮಾರ್ಚ್ 2025ರಂದು ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ಮೂಡಲಪಾಯ ಯಕ್ಷಗಾನ ಪ್ರಸಂಗ ‘ಕರ್ಣ ಅರ್ಜುನರ ಕಾಳಗ’ ಪ್ರದರ್ಶನಗೊಳ್ಳಲಿದೆ. ರವೀಂದ್ರ ತಲಕಾಡು ಇವರು ಭಾಗವತಿಕೆ ಮತ್ತು ಮದ್ದಳೆ, ನಾರಾಯಣಸ್ವಾಮಿ ಮುಖವಾಣಿ, ಮಂಜುನಾಥ ಎಲ್. ಬಡಿಗೇರ ರಂಗ ಪರಿಷ್ಕರಣೆ ಹಾಗೂ ಸೋಮಣ್ಣ ಮತ್ತು ಅರ್ಪಿತಾ ಇವರು ರಂಗನಿರ್ವಾಣೆ ಮಾಡಲಿರುವರು.