ಮೈಸೂರು : ಸ್ಪಂದನ ಸಾಂಸ್ಕೃತಿಕ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಸ್ಮಯ ಪ್ರಕಾಶನದ ವತಿಯಿಂದ ರಾಜ್ಯ ಮಟ್ಟದ ಯುಗಾದಿ ಕವಿಗೋಷ್ಠಿಯನ್ನು ಆಯೋಜಿಸಲು ಉದ್ದೇಶಿಸಲಾಗಿದ್ದು, ನಾಡಿನ ಆಸಕ್ತ ಕವಿಗಳಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ ಎಂದು ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ತಿಳಿಸಿದ್ದಾರೆ.
ಈ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವ ಯಾವುದೇ ವಯೋಮಾನದ ಕವಿ-ಕವಯತ್ರಿಯರು ಯಾವುದೇ ವಸ್ತು ವಿಷಯ ಕುರಿತು ಕವನಗಳನ್ನು ರಚಿಸಬಹುದು. ಆದರೆ, ಕವನಗಳು ಗರಿಷ್ಟ ಇಪ್ಪತ್ತು ಸಾಲುಗಳ ಮಿತಿಯೊಳಗೆ ಇರಬೇಕು. ಕವನ /ಗಜಲುಗಳಾದರೆ ಎರಡನ್ನೂ ಅಥವಾ ಗರಿಷ್ಠ ಆರು ಸಾಲುಗಳ ಮಿತಿಯೊಳಗಿನ ಚುಟುಕು, ವಚನ, ಹನಿಗವನಗಳಾದರೆ ಎಂಟನ್ನೂ ಕಳುಹಿಸಿಕೊಡಬಹುದು.
ಆಯ್ಕೆಯಾದ ಕವಿಗಳಿಗೆ ದಿನಾಂಕ 06 ಏಪ್ರಿಲ್ 2025ರಂದು ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಯುಗಾದಿ ಕವಿಮೇಳದಲ್ಲಿ ಕವನ ವಾಚನ ಮಾಡಲು ಅವಕಾಶ ನೀಡುವ ಜತೆಗೆ, ಪ್ರತಿಯೊಬ್ಬ ಕವಿಗೂ ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಮೊದಲು ಕವನಗಳನ್ನು ಕಳುಹಿಸಿದ 60 ಮಂದಿ ಕವಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
ಆಸಕ್ತ ಕವಿಗಳು ತಮ್ಮ ಕವನಗಳನ್ನು ಕಿರು ಪರಿಚಯದ ಜತೆಗೆ ದಿನಾಂಕ 15 ಮಾರ್ಚ್ 2025ರೊಳಗೆ ತಲುಪುವಂತೆ ಟಿ. ಸತೀಶ್ ಜವರೇಗೌಡ, ಸಾಹಿತಿ ಮತ್ತು ಸಂಘಟಕರು, ವಿಸ್ಮಯ ಪ್ರಕಾಶನ, 442/10. ಕೃಷ್ಣ ಬೇಕರಿ ಬಿಲ್ಡಿಂಗ್, ರಾಮಸ್ವಾಮಿ ಸರ್ಕಲ್, ಮೈಸೂರು-570004 ಈ ವಿಳಾಸಕ್ಕೆ ಅಂಚೆ ಮೂಲಕವೇ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ. 9880264678/8317457397 ಸಂಪರ್ಕಿಸಲು ತಿಳಿಸಿದ್ದಾರೆ.