ಮಂಗಳೂರು : ಶ್ರೀ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಹುಬ್ಬಳ್ಳಿ ಮತ್ತು ಶ್ರೀ ಬಿ. ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಟ್ (ರಿ.) ಉರ್ವಾ ಮಂಗಳೂರು ಇವರ ಸಹಯೋಗದಲ್ಲಿ ಶ್ರೀ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಹುಬ್ಬಳ್ಳಿ ಇದರ ರಜತ ಮಹೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಗ್ರಂಥ ಲೋಕರ್ಪಣಾ ಸಮಾರಂಭವನ್ನು ದಿನಾಂಕ 01 ಮಾರ್ಚ್ 2025ರಂದು ಸಂಜೆ 4-00 ಗಂಟೆಗೆ ಉರ್ವಾದ ಕಾ. ವಾ. ಆಚಾರ್ಯ ಸಂಸ್ಕೃತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಸಂಜೆ 4-00 ಗಂಟೆಗೆ ಸ್ವರ್ಣಕುಡ್ಲ ಸೀಸನ್ 6 ವಿನ್ನರ್ ಮಾಸ್ಟರ್ ಆಯುಷ್ ಪ್ರೇಮ ಇವರಿಂದ ಭಾವಗೀತೆ ಹಾಗೂ ಭಕ್ತಿಗೀತೆಗಳ ಗಾಯನ ನಡೆಯಲಿದೆ. ಗ್ರಂಥ ಲೋಕರ್ಪಣಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಬಿ. ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಟಿನ ಎಸ್.ವಿ. ಆಚಾರ್ ಇವರ ವಹಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಇವರು ಉದ್ಘಾಟನೆ ಮಾಡಲಿರುವರು. ಶ್ರೀ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿಯ ಸಂಚಾಲಕರಾದ ಇಂ. ಭೀಮಸೇನ ಬಡಿಗೇರ ಇವರು ಪ್ರಸ್ತಾವನೆಗೈಯ್ಯಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಕೆ.ಕೆ. ಆಚಾರ್ಯ ಇವರು ಗ್ರಂಥ ಲೋಕರ್ಪಣೆಗೊಳಿಸಲಿದ್ದಾರೆ. ‘ವಿ.ಜಿ. ದೀಕ್ಷಿತ್ ಸಮಗ್ರ ಕೃತಿ ಸಂಪುಟ’ ಕೃತಿಯನ್ನು ಇಂಗ್ಲೀಷ್ ಪ್ರಾಧ್ಯಾಪಕರಾದ ಪ್ರೊ. ಜಿ. ಯಶವಂತ ಆಚಾರ್ಯ ಹಾಗೂ ‘ಬೆಳ್ಳಿ ಬೆಳಕು’ ಕೃತಿಯನ್ನು ವಿಭಾಗ ಮುಖ್ಯಸ್ಥರಾದ ಶ್ರೀಮತಿ ಡಾ. ಸುಷ್ಮಾ ಪಿ.ಎಸ್. ಇವರು ಪರಿಚಯ ಮಾಡಲಿದ್ದಾರೆ.