ಉಡುಪಿ : ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಸಂಸ್ಥೆಯು ಪ್ರಸ್ತುತ ಪಡಿಸುವ 27ನೇ ‘ಮಂಜುನಾದ’ ಸಂಗೀತ ಕಛೇರಿಯನ್ನು ದಿನಾಂಕ 03 ಮಾರ್ಚ್ 2025ರಂದು ಸಂಜೆ ಗಂಟೆ 5-30ಕ್ಕೆ ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳಾಧಾರಿತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಯಲ್ಲಿ ಮಣಿಪಾಲದ ಯುವ ಕಲಾಮಣಿ ವಿದುಷಿ ಉಷಾ ರಾಮಕೃಷ್ಣ ಮತ್ತು ಬೆಂಗಳೂರಿನ ವಿದುಷಿ ಸ್ಮೃತಿ ಭಾಸ್ಕರ್ ಇವರ ಹಾಡುಗಾರಿಕೆಗೆ ಪುತ್ತೂರಿನ ವಿದುಷಿ ತನ್ಮಯೀ ಉಪ್ಪಂಗಳ ಇವರು ವಯಲಿನ್, ಬೆಂಗಳೂರಿನ ವಿದ್ವಾನ್ ಅನಿರುದ್ಧ ಭಟ್ ಇವರು ಮೃದಂಗ, ಬೆಂಗಳೂರಿನ ವಿದ್ವಾನ್ ಶಮಿತ್ ಗೌಡ ಇವರು ಘಟಂ ಹಾಗೂ ಪರ್ಕಳದ ಶ್ರೀಮತಿ ಸುರೇಖಾ ಭಟ್ ಮತ್ತು ಸುರತ್ಕಲ್ ಶ್ರೀಮತಿ ಸುಜಾತಾ ಎಸ್. ಭಟ್ ಇವರು ತಂಬೂರದಲ್ಲಿ ಸಾಥ್ ನೀಡಲಿದ್ದಾರೆ. ಮಣಿ ಕೃಷ್ಣಸ್ವಾಮಿ ಆಕಾಡೆಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.