ಮೈಸೂರು : ರಂಗಾಂತರಂಗ ಮೈಸೂರು (ರಿ.) ಮಕ್ಕಳ ಅಭಿನಯ ರಂಗಶಾಲೆ ಇವರ ವತಿಯಿಂದ ‘ಕಲರವ’ ಮಕ್ಕಳ ಬೇಸಿಗೆ ಶಿಬಿರವನ್ನು ದಿನಾಂಕ 10 ಏಪ್ರಿಲ್ 2025ರಿಂದ 10 ಮೇ 2025ರವರೆಗೆ ಬೆಳ್ಳಿಗೆ 10-00 ಗಂಟೆಯಿಂದ ಸಂಜೆ 4-00 ಗಂಟೆ ತನಕ ಆಯೋಜಿಸಲಾಗಿದೆ.
ನಾಟಕ, ಮೈಮ್, ಜನಪದ ಗೀತೆಗಳು, ಯೋಗ ಮತ್ತು ಧ್ಯಾನ, ನೃತ್ಯ, ಚಿತ್ರಕಲೆ, ದೇಶಿ ಆಟಗಳು, ನಿರೂಪಣ ಕೌಶಲ್ಯ, ಧ್ವನಿ ಮತ್ತು ಮಾತು, ಭಾಷಾ ಕೌಶಲ್ಯ, ಪರಿಸರ ಮತ್ತು ಪ್ರಾಣಿಗಳ ಮಾಹಿತಿ, ಮಕ್ಕಳಿಗಾಗಿ ಸಿನಿಮಾ ವೀಕ್ಷಣೆ, ಪೌರಾಣಿಕ ಮತ್ತು ಸಾಮಾಜಿಕ ಐತಿಹಾಸಿಕ ಕಥೆಗಳ ಮಾಹಿತಿ ಈ ಶಿಬಿರದ ಚಟುವಟಿಕೆಗಳಗಿದ್ದು, ಅಭಿನಯ ತರಬೇತಿ, ಭರತನಾಟ್ಯ, ಸಂಗೀತ ಮತ್ತು ನೃತ್ಯ ವಾರಾಂತ್ಯ ತರಗತಿಗಳನ್ನು ಈ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9739919004 ಸಂಖ್ಯೆಯನ್ನು ಸಂಪರ್ಕಿಸಿರಿ.