ಪುತ್ತೂರು : ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ ಮುಂಡೂರು ನರಿಮೊಗರು ಇಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ದಿನಾಂಕ 26 ಫೆಬ್ರವರಿ 2025ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ‘ದಕ್ಷ ಯಜ್ಞ’ ಎಂಬ ತಾಳಮದ್ದಳೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶಬರಾಯ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಪದ್ಯಾಣ ಜಯರಾಮ ಭಟ್ ಮತ್ತು ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ (ಈಶ್ವರ), ಕಿಶೋರಿ ದುಗ್ಗಪ್ಪ ನಡುಗಲ್ಲು (ದಾಕ್ಷಾಯಿಣಿ), ಗಾಯತ್ರಿ ಹೆಬ್ಬಾರ್ (ವೃದ್ಧ ಬ್ರಾಹ್ಮಣ), ಹರಿಣಾಕ್ಷಿ ಜೆ. ಶೆಟ್ಟಿ (ದಕ್ಷ), ಶಾರದಾ ಅರಸ್ (ವೀರಭದ್ರ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು.