ಮಂಗಳೂರು : ಪ್ರಕಾಶ್ ರಾಜ್ ಫೌಂಡೇಷನ್ ವತಿಯಿಂದ ‘ನಿರ್ದಿಗಂತ ಉತ್ಸವ 2025’ ಕಾರ್ಯಕ್ರಮವು ದಿನಾಂಕ 28 ಫೆಬ್ರವರಿ 2025ರಂದು ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಕಾಲೇಜಿನಲ್ಲಿ ಉದ್ಘಾಟನೆಗೊಂಡಿತು.
ಉದ್ಘಾಟನಾ ಸಮಾರಂಭದಲ್ಲಿ ಬಹುಬಾಷಾ ನಟ ಪ್ರಕಾಶ್ ರಾಜ್ ಮಾತಾನಾಡಿ ಕರಾವಳಿ ಭಾಗದ ಸೌಹಾರ್ದತೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಕರಾವಳಿ ಜನರ ಕೆಲಸ ಕಾರ್ಯಗಳಿಂದ ಅವರಲ್ಲಿರುವ ಸೌಹಾರ್ದತೆಯನ್ನು ಕಾಣಬಹುದು ಹಾಗೂ ನಾಲ್ಕು ದಿನದ ಕಾರ್ಯಕ್ರಮಕ್ಕೆ ವಿನ್ಯಾಸ ಮಾಡಿದಂತಹ ಮೇಘ ಶೆಟ್ಟಿಯವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಬಳಿಕ ರೆವರೆಂಡ್ ಫಾದರ್ ಡಾ. ಪ್ರವೀಣ್ ಮಾರ್ಟಿಸ್ ಇವರು ಮಾತನಾಡಿ, ಹೂವಿಗೂ ನನಗೂ ಅವಿನಾಭಾವ ಸಂಬಂಧವಿದೆ. ಬಾಲ್ಯದಲ್ಲಿ ಹೂವು ಹೆಣೆಯುವ ಕೆಲಸ ಮಾತ್ರ ಗೊತ್ತಿತ್ತು. ಇವತ್ತು ಈ ಕಾರ್ಯಕ್ರಮದಲ್ಲಿ ಹೂವಿನ ವಿನ್ಯಾಸವು ನನ್ನ ಬಾಲ್ಯವನ್ನು ನೆನಪಿಸಿತು. ನಿರ್ದಿಗಂತ ತಂಡವು ನಮ್ಮ ಕಾಲೇಜಿಗೆ ಬಂದಿರುವುದು ಬಹಳ ಸಂತಸ ತಂದಿದ್ದು, ಮಲ್ಲಿಗೆ ಹೂವು ಹೇಗೆ ಒಂದನ್ನೊಂದು ಹೆಣೆದುಕೊಂಡಿದೆಯೋ ಅದೇ ರೀತಿ ನಮ್ಮ ಬಂಧ ಬೆಸೆದಿರಲಿ” ಎಂದು ತಿಳಿಸಿದರು.