ಮಂಗಳೂರು : ಅಮೃತ ಪ್ರಕಾಶ ಪತ್ರಿಕೆಯ ಸಾರಥ್ಯದಲ್ಲಿ ದುಬೈಯ ಲೇಖಕ ಬಿ.ಕೆ. ಗಣೇಶ್ ರೈ ಇವರ ಲೇಖನ ಸಂಕಲನ ಕೃತಿ ‘ಕಡಲಾಚೆಯ ರಮ್ಯ ನೋಟ ದುಬಾಯಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 04 ಮಾರ್ಚ್ 2025ರಂದು ಬೆಳಗ್ಗೆ 11-00 ಗಂಟೆಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಬುಧಾಬಿ ಕರ್ನಾಟಕ ಸಂಘ ಯು.ಎ.ಇ. ಇದರ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ ನಾಯಕ್ ಇಂದಾಜೆಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಯು.ಎ.ಇ. ಬಂಟ್ಸ್ ದುಬಾಯಿ ಇದರ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಇವರು ಕೃತಿ ಬಿಡುಗಡೆ ಮಾಡಲಿದ್ದು, ಲೇಖಕಿ ಡಾ. ಅರುಣಾ ನಾಗರಾಜ್ ಇವರು ಕೃತಿ ಪರಿಚಯ ಮಾಡಲಿದ್ದಾರೆ.