ಕುಂದಾಪುರ : ಶ್ರೀ ಕನ್ನಿಕಾ ಪರಮೇಶ್ವರಿ ಯಕ್ಷಗಾನ ಕಲಾ ಸಂಘ (ರಿ.) ಕಂಡ್ಲೂರು ಇದರ ಸುವರ್ಣ ಸಂಭ್ರಮದ ಪ್ರಯುಕ್ತ 50ನೇ ‘ಯಕ್ಷ ಕಲೋತ್ಸವ’ವನ್ನು ದಿನಾಂಕ 05 ಮಾರ್ಚ್ 2025ರಿಂದ 10 ಮಾರ್ಚ್ 2025ರವರೆಗೆ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಎದುರುಗಡೆ ಆಯೋಜಿಸಲಾಗಿದೆ.
ದಿನಾಂಕ 05 ಮಾರ್ಚ್ 2025ರಂದು ರಾತ್ರಿ 8-00 ಗಂಟೆಗೆ ಪಡುಕೆರೆ ಮಣೂರು ಗೀತಾನಂದ ಫೌಂಡೇಷನ್ ಇದರ ಆನಂದ ಸಿ. ಕುಂದರ್ ಇವರ ಅಧ್ಯಕ್ಷತೆಯಲ್ಲಿ ಆಡಳಿತ ಮೊಕ್ತೇಸರರಾದ ಸಚ್ಚಿದಾನಂದ ಜಾತ್ರ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಂಘದ ಬಾಲಕ ಬಾಲಕಿಯರಿಂದ ಶ್ರೀಧರ ಹೆಬ್ಬಾರ್ ಇವರ ನಿರ್ದೇಶನದಲ್ಲಿ ‘ಶಶಿಪ್ರಭಾ ಪರಿಣಯ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ದಿನಾಂಕ 06 ಮಾರ್ಚ್ 2025ರಂದು ಸಂಜೆ 7-00 ಗಂಟೆಗೆ ಶ್ರೀ ಸಾಲಿಗ್ರಾಮ ಮೇಳದ ಪಿ. ಕಿಶನ್ ಹೆಗ್ಡೆ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಕಲಾನಿಕೇತನ ಬಸ್ರೂರು ಇದರ ವಿದುಷಿ ವೈದೇಹಿ ಸುಭಾಷಿತ್ ಇವರ ಶಿಷ್ಯೆಯರಿಂದ ದಶಾವತಾರ ಪೌರಾಣಿಕ ನೃತ್ಯ ರೂಪಕ ಪ್ರಸ್ತುತಗೊಳ್ಳಲಿದೆ.
ದಿನಾಂಕ 07 ಮಾರ್ಚ್ 2025ರಂದು ಮಧ್ಯಾಹ್ನ 2-30 ಗಂಟೆಗೆ ಸಾಲಿಗ್ರಾಮದ ಡಾ. ಗಣೇಶ್ ಯು. ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ತೆಂಕು ಬಡಗು ಪ್ರಸಿದ್ಧ ಭಾಗವತರು ಮತ್ತು ಹಿಮ್ಮೇಳದವರ ಕೂಡುವಿಕೆಯಲ್ಲಿ ‘ಗಾನ ವೈಭವ’ ನಡೆಯಲಿದೆ.
ದಿನಾಂಕ 08 ಮಾರ್ಚ್ 2025ರಂದು ಸಂಜೆ 7-00 ಗಂಟೆಗೆ ವಿಧಾನ ಸಭಾ ಸದಸ್ಯರಾದ ಡಾ. ಭರತ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ಪ್ರಸಂಗಕರ್ತ ದಿ. ಡಾ. ವೈ. ಚಂದ್ರಶೇಖರ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸಂಘದ ಸದಸ್ಯರಿಂದ ಖಾಂಡವವನ ದಹನ’ ಹಾಗೂ ಯಕ್ಷ ಸಿಂಚನ ವೈದ್ಯ ಬಾಂಧವರಿಂದ ‘ಸುರನದಿ – ಸುತ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ದಿನಾಂಕ 09 ಮಾರ್ಚ್ 2025ರಂದು ಸಂಜೆ 2-30 ಗಂಟೆಗೆ ಕುಂದಾಪುರದ ಡಾ. ಆದರ್ಶ ಹೆಬ್ಬಾರ್ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ‘ಕರ್ಣಾರ್ಜುನ’ ತಾಳಮದ್ದಳೆ ಪ್ರಸ್ತುತಗೊಳ್ಳಲಿದೆ.
ದಿನಾಂಕ 10 ಮಾರ್ಚ್ 2025ರಂದು ಸಂಜೆ 7-00 ಗಂಟೆಗೆ ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಮೇಳದವರಿಂದ ಶ್ರೀ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ‘ಯುಗ ದರ್ಶನ’ ಯಕ್ಷಗಾನ ಬಯಲಾಟ ನಡೆಯಲಿದೆ.