ಬೆಂಗಳೂರು : ಯಕ್ಷವಾಹಿನಿ ಇದರ ವತಿಯಿಂದ ‘ಯಕ್ಷ ಸಾಹಿತ್ಯ ಸಾಂಗತ್ಯ -25’ ನಾಡಿನ ಖ್ಯಾತ ಕವಿಗಳು, ಚಿಂತಕರು, ವಿದ್ವಾಂಸರಿಂದ ಯಕ್ಷ ಪ್ರಸಂಗಗಳ ಸಾಹಿತ್ಯ ಅವಲೋಕನದ ಸರಣಿ ಕಾರ್ಯಕ್ರಮವನ್ನು ದಿನಾಂಕ 02 ಮಾರ್ಚ್ 2025ರಂದು ಸಂಜೆ 6-00 ಗಂಟೆಗೆ ಜೂಮ್ ಮೀಟಿಂಗ್ ನಲ್ಲಿ ಆಯೋಜಿಸಲಾಗಿದೆ.
ಹಂಪಿ ವಿಶ್ವವಿದ್ಯಾನಿಲಯದ ಖ್ಯಾತ ವಿಮರ್ಶಕರು ಹಾಗೂ ಪ್ರಾಧ್ಯಪಕರಾದ ಡಾ. ವೆಂಕಟಗಿರಿ ದಳವಾಯಿ ಇವರಿಂದ ಶ್ರೀ ಹೊಸ್ತೋಟ ಮಂಜುನಾಥ ಭಾಗವತರು ರಚಿಸಿದ ‘ರಾಮ ನಿರ್ಯಾಣ’ ಯಕ್ಷ ಪ್ರಸಂಗದ ಸಾಹಿತ್ಯಾವಲೋಕನ ನಡೆಯಲಿದ್ದು, ಹಿರಿಯ ಸಂಶೋಧಕರು ಡಾ. ಜಿ.ಎಸ್. ಭಟ್ ಸಾಗರ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಖ್ಯಾತ ಯಕ್ಷಗಾನ ವಿದ್ವಾಂಸರು ಡಾ. ಆನಂದರಾಮ ಉಪಾಧ್ಯ ಇವರಿಂದ ಸಮನ್ವಯ, ಶ್ರೀ ಶ್ರೀಧರ ಡಿ.ಎಸ್., ಪ್ರೊ. ಎಮ್. ಎಲ್. ಸಾಮಗ, ಶ್ರೀ ಗಿಂಡಿಮನೆ ಮೃತ್ಯುಂಜಯ, ಶ್ರೀ ನಟರಾಜ ಉಪಾಧ್ಯ, ಶ್ರೀ ಅನಂತ ಪದ್ಮನಾಭ ಫಾಟಕ್, ಶ್ರೀ ಇಟಗಿ ಮಹಾಜಲೇಶ್ವರ ಭಟ್, ವೇ ಅಜಿತ್ ಕಾರಂತ್, ಶ್ರೀ ಲನಾ ಭಟ್ ಹಾಗೂ ಶ್ರೀ ಸುಹಾಸ್ ಮರಾಠ ಸಲಹೆ ಸಹಕಾರ ನೀಡಲಿದ್ದಾರೆ. ಬೆಂಗಳೂರಿನ ಶ್ರೀ ರವಿ ಮಡೋಡಿ ಇವರು ಪರಿಕಲ್ಪನೆ ಹಾಗೂ ಸಂಯೋಜನೆ ಮಾಡಿದ್ದು, ಹೆಚ್ಚಿನ ಮಾಹಿತಿಗಾಗಿ 9986384205, 9632824391 ಸಂಪರ್ಕಿಸಿರಿ.
Join Zoom Meeting – https://us06web.zoom.us/j/83896956207…
Meeting ID : 838 9695 6207 Passcode: 577230
Facebook broadcast at: https://www.facebook.com/yakshavahiniprathistana/