ಪುತ್ತೂರು : ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ವತಿಯಿಂದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ದಶಮನೋತ್ಸವದ ಸವಿ ನೆನಪಿನಲ್ಲಿ ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ‘ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ 2025’ಯನ್ನು ಆಯೋಜಿಸಲಾಗಿದೆ. ‘ಡಾ. ಕೆ. ಶಿವರಾಮ ಕಾರಂತರ ‘ಚೋಮನ ದುಡಿ’ ಕಾದಂಬರಿಯಲ್ಲಿ ಸಾಮಾಜಿಕ ಮೌಲ್ಯ’ ಎಂಬ ವಿಷಯದ ಬಗ್ಗೆ ರಚಿಸಿದ ಪ್ರಬಂಧಕ್ಕೆ ಪ್ರಥಮ : 3000/-, ದ್ವಿತೀಯ : 2000/-, ತೃತೀಯ : 1000/- ಬಹುಮಾನಗಳು ನೀಡಲಾಗುವುದು.
ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿವೆ :
1. ಪ್ರತಿ ಕಾಲೇಜಿನಿಂದ ಆಸಕ್ತ ಗರಿಷ್ಟ 5 ಜನ ವಿದ್ಯಾರ್ಥಿಗಳು ಭಾಗವಹಿಸಬಹುದು.
2. ಸಂಸ್ಥೆಯ ಮುಖ್ಯಸ್ಥರ ದೃಢೀಕರಣದೊಂದಿಗೆ ತಮ್ಮ ಸ್ವ ಹಸ್ತಾಕ್ಷರದಲ್ಲಿ ಬರೆದ ಪ್ರಬಂಧವನ್ನು ಕಳುಹಿಸಬೇಕು.
3. ಪ್ರಬಂಧವು ಗರಿಷ್ಟ 6 ಪುಟಗಳನ್ನು ಮೀರಬಾರದು. (ಒಂದು ಬದಿ ಎ-4 ಅಳತೆ)
4. ಪ್ರಬಂಧವನ್ನು ತಮ್ಮ ವಿಳಾಸ ಮತ್ತು ಸಂಪರ್ಕ ಸಂಖ್ಯೆಯ (ವಾಟ್ಸಾಪ್ ಸಂಖ್ಯೆ) ಜೊತೆಗೆ ದಿನಾಂಕ 30 ಮಾರ್ಚ್ 2025ರ ಒಳಗೆ ಕೆಳಗೆ ತಿಳಿಸಿದ ವಿಳಾಸಕ್ಕೆ ತಲುಪುವಂತೆ ಕಳುಹಿಸತಕ್ಕದ್ದು.
5. ತೀರ್ಪುಗಾರರ ನಿರ್ಣಯವೇ ಅಂತಿಮ.
ಭಾಗವಹಿಸುವಿಕೆಗೆ ಇ-ಪ್ರಮಾಣ ಪತ್ರ ಹಾಗೂ ಆಯ್ಕೆ ಮಾಡಿದ ಪ್ರಬಂಧಗಳನ್ನು ಕಾಲೇಜು ವಾರ್ಷಿಕ ಸಂಚಿಕೆ ‘ಜಾಗೃತಿ’ಯಲ್ಲಿ ಪ್ರಕಟಿಸಲಾಗುವುದು.