ಕೋಟ : ಸುವಿಕಾ ಸಾಂಸ್ಕೃತಿಕ ಸಂಘಟನೆ ಕೋಟ ಇದರ ವತಿಯಿಂದ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನ (ರಿ.) ಕೋಟ ಇವರ ಸಹಯೋಗದೊಂದಿಗೆ ಉಪನ್ಯಾಸಕ ಹೆಚ್. ಸುಜಯೀಂದ್ರ ಹಂದೆಯವರ ಸಂಪಾದಿತ ಕವನ ಸಂಕಲನ ‘ನನೆ ಮೊಗ್ಗು’ ಅನಾವರಣ ಹಾಗೂ ಉಡುಪಿ ಜಿಲ್ಲಾ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿಯನ್ನು ದಿನಾಂಕ 09 ಮಾರ್ಚ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಕೋಟ ಕಾರಂತ ಥೀಂ ಪಾರ್ಕ್ ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಕೋಟತಟ್ಟು ಪಂಚಾಯತ್ ಇವರ ಅಧ್ಯಕ್ಷರಾದ ಕೆ. ಸತೀಶ್ ಕುಂದರ್ ಬಾರಿಕೆರೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಕವಿ ಸುಮನ ಹೇರ್ಳೆ ಇವರು ಕೃತಿ ಅನಾವರಣಗೊಳಿಸಲಿದ್ದು, ಉಡುಪಿಯ ದೇಶ ವಿದೇಶಗಳ ಫಾರ್ಮಾಸುಟಿಕಲ್ ಸಂಸ್ಥೆಗಳ ಗುಣ ಮಟ್ಟ ನಿಯಂತ್ರಣ ಸಲಹೆಗಾರರಾದ ಡಾ. ವೆಂಕಟ ಕೃಷ್ಣ ಕೆ. ಇವರು ನಮ್ಮೊಂದಿಗೆ ಭಾಗವಹಿಸಲಿದ್ದಾರೆ. ಬಳಿಕ ಉಡುಪಿಯ ನೇತ್ರ ಜ್ಯೋತಿ ಇನ್ ಸ್ಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ತೃತೀಯ ಬಿ.ಎಸ್ಸಿ.ಯ ವಿದ್ಯಾರ್ಥಿನಿ ಐಶ್ವರ್ಯ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ‘ವಿದ್ಯಾರ್ಥಿ ಕವಿಗೋಷ್ಠಿ’ ನಡೆಯಲಿದೆ.