ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆಯಲ್ಲಿ ‘ಶಲ್ಯ ಸಾರಥ್ಯ’ ಆಖ್ಯಾನವು ದಿನಾಂಕ 03 ಮಾರ್ಚ್ 2025ರಂದು ಶ್ರೀ ಮಹಾಲಿಂಗೇಶ್ವರ ದೇವಳದ ರಾಜಗೋಪುರದಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಯಲ್.ಯನ್. ಭಟ್ ಬಟ್ಯಮೂಲೆ, ತೆಂಕಬೈಲು ಗೋಪಾಲಕೃಷ್ಣ ಭಟ್, ಅಚ್ಯುತ ಪಾಂಗಣ್ಣಾಯ ಕೋಡಿಬೈಲು, ಕುಮಾರಿ ಶರಣ್ಯ ನೆತ್ತರಕೆರೆ ಸಹಕರಿಸಿದರು. ಮುಮ್ಮೇಳದಲ್ಲಿ ಕೌರವ (ಗುಂಡ್ಯಡ್ಕ ಈಶ್ವರ ಭಟ್), ಶಲ್ಯ (ಗುಡ್ಡಪ್ಪ ಬಲ್ಯ), ಕರ್ಣ (ವಿ.ಕೆ. ಶರ್ಮ ಅಳಿಕೆ) ಸಹಕರಿಸಿದರು. ಅಧ್ಯಕ್ಷ ಭಾಸ್ಕರ್ ಬಾರ್ಯ ಸ್ವಾಗತಿಸಿ, ಟಿ. ರಂಗನಾಥ ರಾವ್ ವಂದಿಸಿದರು.