ಸುಳ್ಯ : ರಂಗ ಮಯೂರಿ ಕಲಾಶಾಲೆ (ರಿ.) ಸುಳ್ಯ ಇದರ ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ರಾಜ್ಯಮಟ್ಟದ ರಂಗ ಶೈಲಿಯ ‘ಬಣ್ಣ 2025’ ಬೇಸಿಗೆ ಶಿಬಿರವನ್ನು ದಿನಾಂಕ 12 ಏಪ್ರಿಲ್ 2025ರಿಂದ 20 ಏಪ್ರಿಲ್ 2025ರವರೆಗೆ ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. 7ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಮಾತ್ರ ಅವಕಾಶ.
ಈ ವರ್ಷ ಹೊಸದಾಗಿ, ಮಕ್ಕಳಿಗೆ ಅಭಿನಯ ಪ್ರಧಾನ ರಂಗ ಶಿಬಿರದೊಂದಿಗೆ, ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಭಾಷಾ ಪರಿಚಯದ ಸಲುವಾಗಿ ಕನ್ನಡ, ಅರೆಭಾಷೆ, ತುಳು, ಹಿಂದಿ, ಇಂಗ್ಲೀಷ್ ಭಾಷೆಗಳ ಮಕ್ಕಳ ನಾಟಕ ತಯಾರಿ ಮತ್ತು ಪ್ರದರ್ಶನ ಕಾರ್ಯಾಗಾರವನ್ನು ಏರ್ಪಡಿಸಿದ್ದೇವೆ. ಜೊತೆಗೆ ಹತ್ತು ಹಲವು ಕ್ರಿಯಾತ್ಮಕ ಚಟುವಟಿಕೆಯೊಂದಿಗೆ ಹೆಸರಾಂತ ರಂಗ ಸಂಸ್ಥೆಗಳಾದ ನೀನಾಸಂ, ರಂಗಾಯಣ, ರಂಗ ಅಧ್ಯಯನ ಕೇಂದ್ರ, ಶಿವ ಸಂಚಾರ ಸಾಣೆಹಳ್ಳಿಯ ನಾಟಕ ನಿರ್ದೇಶಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಈ ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ನೋಂದಾವಣೆ ಮತ್ತು ಹೆಚ್ಚಿನ ಮಾಹಿತಿಗಾಗಿ ಲೋಕೇಶ್ ಊರುಬೈಲ್ 9611355496, ಶಶಿಕಾಂತ್ ಮಿತ್ತೂರು 8150827781, ಸುನಂದಾ ಶೆಟ್ಟಿ 9481178541 ಮತ್ತು ಸೌಮ್ಯ ಆಲಂಕಲ್ಯ 8332938875 ಸಂಖ್ಯೆಯನ್ನು ಸಂಪರ್ಕಿಸಿರಿ.