ಬೆಂಗಳೂರು : ಬೇವಿನಹಳ್ಳಿಯ ‘ಚಿಗುರು’ ತಂಡದ ವತಿಯಿಂದ ‘ಚಿಗುರು ರಂಗೋತ್ಸವ’ದಲ್ಲಿ ದಿನಾಂಕ 07ರಿಂದ 09 ಮತ್ತು 14ರಿಂದ 16 ಮಾರ್ಚ್ 2025ರವೆರೆಗೆ ಬೆಂಗಳೂರಿನ ಪ್ರೆಸ್ಟೀಜ್ ಸೆಂಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್ ಇಲ್ಲಿ ಕನ್ನಡ ನಾಟಕಗಳ ಪ್ರದರ್ಶನವನ್ನು ಪ್ರತಿದಿನ 3-00 ಮತ್ತು 7-00 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ದಿನಾಂಕ 07 ಮಾರ್ಚ್ 2025ರಂದು ಪ್ರಕಾಶ್ ಬೆಳವಾಡಿ ಇವರ ನಿರ್ದೇಶನದಲ್ಲಿ ಸೆಂಟರ್ ಫಾರ್ ಫಿಲ್ಮ್ ಅಂಡ್ ಡ್ರಾಮಾ ತಂಡದವರಿಂದ ‘ಎಡಬಿಡಂಗಿ’, ದಿನಾಂಕ 08 ಮಾರ್ಚ್ 2025ರಂದು ಚಿತ್ರಶೇಕರ್ ಎನ್.ಎಸ್. ಇವರ ನಿರ್ದೇಶನದಲ್ಲಿ ಸಂಚಯ ತಂಡದವರಿಂದ ‘ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ’, ದಿನಾಂಕ 09 ಮಾರ್ಚ್ 2025ರಂದು ಶ್ರದ್ದಾ ರಾಜ್ ಇವರ ನಿರ್ದೇಶನದಲ್ಲಿ ಜಂಗಮ ಕಲೆಕ್ಟಿವ್ ತಂಡದವರಿಂದ ‘ರುಮುರುಮುರುಮು’, ದಿನಾಂಕ 14 ಮಾರ್ಚ್ 2025ರಂದು ಮಂಗಳ ಎನ್. ಇವರ ನಿರ್ದೇಶನದಲ್ಲಿ ಸಂಚಾರಿ ಥಿಯೇಟರ್ ತಂಡದವರಿಂದ ‘ರೊಶೊಮನ್’, ದಿನಾಂಕ 15 ಮಾರ್ಚ್ 2025ರಂದು ವಿನಯ್ ಶಾಸ್ತ್ರಿ ಇವರ ನಿರ್ದೇಶನದಲ್ಲಿ ವಾಸ್ಪ್ ಥಿಯೇಟರ್ ತಂಡದವರಿಂದ ‘ಹೀಗಾದ್ರೆ ಹೇಗೆ ?’ ದಿನಾಂಕ 16 ಮಾರ್ಚ್ 2025ರಂದು ವೆಂಕಟೇಶ್ ಪ್ರಸಾದ್ ಇವರ ನಿರ್ದೇಶನದಲ್ಲಿ ಬೆಂಗಳೂರು ಥಿಯೇಟರ್ ಕಲೆಕ್ಟಿವ್ ತಂಡದವರಿಂದ ‘ನಿನ್ನ ಪ್ರೀತಿಯ ನಾನು !’ ನಾಟಕ ಪ್ರದರ್ಶನ ನೀಡಲಿದ್ದಾರೆ.