ಮಂಗಳೂರು : ತುಳು ಕೂಟ (ರಿ) ಕುಡ್ಲ ಇದರ ವತಿಯಿಂದ ‘ಬಂಗಾರ್ ಪರ್ಬ’ ಕಾರ್ಯಕ್ರಮವನ್ನು ದಿನಾಂಕ 09 ಮಾರ್ಚ್ 2025ರಂದು ಬೆಳಗ್ಗೆ 9-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೀರ್ತಿಶೇಷ ಮರೋಳಿ ಬಿ. ದಾಮೋದರ ನಿಸರ್ಗ ವೇದಿಕೆಯಲ್ಲಿ ಬೆಳಿಗ್ಗೆ 9-00 ಗಂಟೆಗೆ ಮಂಗಳೂರಿನ ತುಳು ವರ್ಲ್ಡ್ ಫೌಂಡೇಶನ್ ಇವರಿಂದ ‘ಪಾಡ್ದನ ಮೇಳ’. ಮಾನ್ಯ ವಿಧಾನ ಸಭಾ ಸಭಾಪತಿಗಳಾದ ಸನ್ಮಾನ್ಯ ಯು.ಟಿ. ಖಾದರ್ ಫರೀದ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು ದೀಪ ಪ್ರಜ್ವಲನೆಗೈಯ್ಯಲಿರುವರು. ಅಪರಾಹ್ನ 11-30 ಗಂಟೆಗೆ ತುಳು ವಿಚಾರಗೋಷ್ಠಿ, 1-00 ಗಂಟೆಗೆ ‘ಯಕ್ಷಮಣಿ’ ಮಹಿಳಾ ತಾಳಮದ್ದಳೆ, ಮಧ್ಯಾಹ್ನ ಗಂಟೆ 2-15ಕ್ಕೆ ಬೆಂಗಳೂರಿನ ‘ಐಲೇಸಾ’ – ದ ವಾಯ್ಸ್ ಆಫ್ ಓಷ್ಯನ್’ ಇವರಿಂದ ‘ತುಳು ಸಾಂಸ್ಕೃತಿಕ ರಂಗು’ ಪ್ರಸ್ತುತಗೊಳ್ಳಲಿದೆ. ಸಂಜೆ 4-00 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಎಂ. ರತ್ನಕುಮಾರ್ ಇವರಿಗೆ ‘ಕೀರ್ತಿಶೇಷ ಮರೋಳಿ ಬಿ. ದಾಮೋದರ ನಿಸರ್ಗ ಪ್ರಶಸ್ತಿ’ ಪ್ರದಾನ ಹಾಗೂ ‘ಬಂಗಾರ ಪಿಂಗಾರ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಜಿಲ್ಲೆಯ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ‘ರೆಂಜೆ ಬನೊತ ಲೆಕ್ಕೆಸಿರಿ’ ತುಳು ಯಕ್ಷಗಾನ ಮತ್ತು ‘ದೈವೊದ ಬೂಳ್ಯ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.