ದೆಹಲಿ : ದೆಹಲಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಏಷ್ಯಾದ ಅತಿದೊಡ್ಡ ಅಕ್ಷರಗಳ ಹಬ್ಬ “ಫೆಸ್ಟಿವಲ್ ಆಫ್ ಲೆಟರ್ಸ್” ಕಾರ್ಯಕ್ರಮ ದಿನಾಂಕ 7 ಮಾರ್ಚ್ 2025 ರಿಂದ 12 ಮಾರ್ಚ್ 2025ರ ವರೆಗೆ ನಡೆಯಲಿದ್ದು ಇದರಲ್ಲಿ ಕನ್ನಡ, ತುಳು, ಕೊಡವ, ಬಂಜಾರ ಸಾಹಿತಿಗಳು ಪಾಲ್ಗೊಂಡಿದ್ದು, ನಾಡಿನ ಹಿರಿಮೆ ಹೆಚ್ಚಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕನ್ನಡ ಲೇಖಕರಾದ ಚಂದ್ರಶೇಖರ ಕಂಬಾರ, ಪೂರ್ಣಿಮಾ ಸುರೇಶ್, ಎಚ್. ಎಸ್. ಶಿವಪ್ರಕಾಶ್, ಮನು ಬಳಿಗಾರ್, ವಿವೇಕ ಶಾನುಭಾಗ ಎಂ. ಎಸ್. ಆಶಾದೇವೀ, ಅಮರೇಶ ನುಗಡೋಣಿ, ಪದ್ಮನಿ ನಾಗರಾಜು, ಸಿದ್ದಪ್ಪ ಸಿ. ಕೊಟರಗಸ್ತಿ, ರಮೇಶ್ ಅರೋಲಿ, ಕೇಶವ ಮಳಗಿ, ರೇಣುಕಾ ರಮಾನಂದ, ಜಯಶ್ರೀ ಕಂಬಾರ್, ಶೋಭಾ ನಾಯ್ಕ, ಸಿದ್ಧರಾಮ ಹೊನ್ನಲ್, ಚಂದ್ರಶೇಖರ ತಾಳ್ಯ, ಬೇಲೂರು ರಘುನಂದನ್, ಶಶಿ ತರೀಕೆರೆ, ಸಹನಾ ವಿಜಯಕುಮರ್, ಎ. ರೇವತಿ ತುಳು ಲೇಖಕಿಯರಾದ ಅಕ್ಷತಾ ರಾಜ್ ಪೆರ್ಲ, ಅತ್ರಾಡಿ ಅಮೃತಾ ಶೆಟ್ಟಿ, ಕೊಡವ ಭಾಷೆ ಲೇಖಕಿಯರಾದ ಎಂ. ಪಿ. ರೇಖಾ, ಮುಳ್ಳಂಗದ ರೇವತಿ ಪೂವಯ್ಯ ಹಾಗೂ ಬಂಜಾರ ಲೇಖಕರಾದ ಶಾಂತಾ ನಾಯ್ಕ ದೇಶ ಆರ್ಯ ಪಾಲ್ಗೊಳ್ಳಲಿದ್ದಾರೆ.
Subscribe to Updates
Get the latest creative news from FooBar about art, design and business.
Next Article ‘ಆಬೊಲಿಂ’ ಮಹಿಳಾ ಕವಿಗೋಷ್ಠಿ | ಮಾರ್ಚ್ 07