Subscribe to Updates

    Get the latest creative news from FooBar about art, design and business.

    What's Hot

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ

    February 26, 2026

    ಉಷಾ ಕೆ.ವಿ. ಇವರ ‘ವೇದಾಂತ’ ಹಾಗೂ ‘ಸ್ಪಂದನ’ ಕೃತಿಗಳ ಲೋಕಾರ್ಪಣಾ ಸಮಾರಂಭ

    February 26, 2026

    ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನದ ಕಾರ್ಯಕ್ರಮ

    February 26, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಡಾ. ವೈದೇಹಿಯವರಿಗೆ “ನೃಪತುಂಗ ಸಾಹಿತ್ಯ ಪ್ರಶಸ್ತಿ”
    Literature

    ಡಾ. ವೈದೇಹಿಯವರಿಗೆ “ನೃಪತುಂಗ ಸಾಹಿತ್ಯ ಪ್ರಶಸ್ತಿ”

    April 1, 20231 Comment2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    1 ಏಪ್ರಿಲ್ 2023, ಬೆಂಗಳೂರು: ದಿನಾಂಕ 29-03-2023 ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಿರಿಯ ಸಾಹಿತಿ ಡಾ. ವೈದೇಹಿಯವರಿಗೆ “ನೃಪತುಂಗ ಸಾಹಿತ್ಯ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಜಾನಕಿ ಶ್ರೀನಿವಾಸಮೂರ್ತಿ ಎಂಬ ನಿಜ ನಾಮದೇಯದ, ಕನ್ನಡ ಸಾಹಿತ್ಯಕ್ಕೆ ಹೊಸ ಸಂವೇದನೆಯನ್ನು ನೀಡಿದ ಲೇಖಕಿ ಡಾ. ವೈದೇಹಿಯವರು ದ.ಕ.ಜಿಲ್ಲೆಯ ಕುಂದಾಪುರದವರು. ಕನ್ನಡ ಕಾವ್ಯ ಲೋಕಕ್ಕೆ ಹೊಸ ತಿರುವನ್ನು ಕೊಟ್ಟವರು ಇವರು. ಅವರ ಕವಿತೆಗಳು ಸೂಕ್ಷ್ಮ ಸಂವೇದನೆಗಳ ಜೊತೆಗೆ ಮಾನವತಾವಾದದ ವಿಸ್ತಾರವನ್ನು ಕನ್ನಡ ಕಾವ್ಯ ಪ್ರಪಂಚಕ್ಕೆ ನೀಡಿದವು. ಇದರೊಂದಿಗೆ ಮಕ್ಕಳ ಸಾಹಿತ್ಯಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ನೃಪತುಂಗ ಅತ್ಯಂತ ಶ್ರೇಷ್ಟ ಹಾಗೂ ಮೌಲಿಕ ಸಾಹಿತ್ಯ ಪ್ರಶಸ್ತಿ.

    ಕನ್ನಡದ ಪ್ರಥಮ ಉಪಲಬ್ದ ಗ್ರಂಥ “ಕವಿರಾಜ ಮಾರ್ಗ”ದ ಕರ್ತೃ ನೃಪತುಂಗನ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಕನ್ನಡದಲ್ಲಿ ಮೌಲಿಕ ಸಾಹಿತ್ಯ ರಚನೆ ಮಾಡಿರುವ ಹಿರಿಯ ಸಾಹಿತಿಯೊಬ್ಬರಿಗೆ ಪ್ರತೀ ವರ್ಷ ನೀಡಲಾಗುತ್ತಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಡಾ. ವೈದೇಹಿಯವರ ಅಪಾರ ಸಾಧನೆಯನ್ನು ಗುರುತಿಸಿ “ಕನ್ನಡದ ಜ್ಞಾನ ಪೀಠ”ವೆಂದೇ ಪ್ರಖ್ಯಾತವಾಗಿರುವ “ನೃಪತುಂಗ ಪ್ರಶಸ್ತಿ”ಯನ್ನು ಈ ವರ್ಷ ಡಾ. ವೈದೇಹಿಯವರಿಗೆ ನೀಡಿದೆ.

    ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ವೈದೇಹಿಯವರು, “ಇತ್ತೀಚಿನ ದಿನಗಳಲ್ಲಿ ಭಾಷೆ ಎಂಬುದು ಸೌಹಾರ್ದದ ಮಾರ್ಗವಾಗುವ ಬದಲು ದಹನದ ಉರುವಲಾಗುತ್ತಿದೆ. ಅದನ್ನು ತಡೆಯುವ ಹೊಣೆ ನಮ್ಮೆಲ್ಲರದ್ದಾಗಿದೆ. ನಮ್ಮ ದೇಶ ಕೂಡು ಕುಟುಂಬವಿದ್ದಂತೆ. ಆದರೆ ಅದನ್ನು ಈ ಹಿಂದೆಯೇ ಒಡೆಯಲಾಗಿದೆ. ಒಮ್ಮೆ ಒಡೆದು ಹೋದ ಮೇಲೆ ಮತ್ತೆ ಮತ್ತೆ ಒಂದಾಗುವುದು ಸುಲಭವಲ್ಲ, ಹಿ೦ದೆ ಉಂಟಾದ ಒಡಕು ಮತ್ತೆ ಕೂಡುವಂತಾಗಿಲ್ಲ, ಹೊತ್ತಿದ ಜ್ವಾಲೆ ಉರಿಯುತ್ತಲೇ ಇದೆ. ಅದನ್ನು ಆರಿಸುವ ಕೆಲಸ ಮಾಡದಿದ್ದರೆ ಮುಂದೆ ದೊಡ್ಡ ಅನಾಹುತವಾಗುತ್ತದೆ” ಎಂದರು.

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಮಾತನಾಡಿ, “ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದರೆ ಭಾಷೆಯ ಜತೆಗೆ ಶಿಕ್ಷಣ ಪಡೆದ ವ್ಯಕ್ತಿ, ಆತನ ವ್ಯಕ್ತಿತ್ವವೂ ಉಳಿಯುತ್ತದೆ. ಇಂಗ್ಲಿಷಿನ ಬೆರಗಿನಲ್ಲಿ ನಾವೆಲ್ಲ ಮೈ ಮರೆಯುತ್ತಿದ್ದೇವೆ. ಕನ್ನಡವನ್ನೇ ಮರೆಯುವ ಸ್ಥಿತಿಗೆ ತಲುಪುತ್ತಿದ್ದೇವೆ. ನಮ್ಮ ಸೃಜನಶೀಲತೆ ಉಳಿಯುವುದು ಮಾತೃಭಾಷೆಯಲ್ಲಿ ಮಾತ್ರ ಎಂಬುದನ್ನು ಎಲ್ಲರೂ ತಿಳಿಯಬೇಕು” ಎಂದು ಹೇಳಿದರು.

    “ಮಯೂರ ವರ್ಮ ಸಾಹಿತ್ಯ ಪ್ರಶಸ್ತಿ”ಯನ್ನು ಕನ್ನಡ ಸಾಹಿತ್ಯದಲ್ಲಿ ಉತ್ತಮ ಕೃಷಿ ಮಾಡುತ್ತಿರುವ ನಲ್ವತ್ತೈದು ವರ್ಷ ವಯಸ್ಸಿನೊಳಗಿನ ಯುವ ಸಾಹಿತಿಗಳಿಗಾಗಿ ಕನ್ನಡ ನಾಡಿನ ಪ್ರಪ್ರಥಮ ರಾಜ ವಂಶ ‘ಕದಂಬ ವಂಶ’ವನ್ನು ಸ್ಥಾಪಿಸಿ ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿದ ಮಯೂರ ವರ್ಮನ ಹೆಸರಿನಲ್ಲಿ “ಮಯೂರ ವರ್ಮ ಸಾಹಿತ್ಯ ಪ್ರಶಸ್ತಿ”ಯನ್ನು ಪ್ರತೀವರ್ಷ ನೀಡುತ್ತಿರುವುದು ಒಂದು ವಿಶೇಷವಾಗಿದೆ. ಈ ಸಲದ “ಮಯೂರ ವರ್ಮ ಸಾಹಿತ್ಯ ಪ್ರಶಸ್ತಿ” ಈ ಕೆಳಗಿನ ನಾಲ್ವರಿಗೆ ಸಲ್ಲುತ್ತದೆ.

    ನಾಟಕಕಾರ, ನಟ, ನಿರ್ದೇಶಕ ಡಾ. ಬೇಲೂರು ರಘುನಂದನ, ಸಾಹಿತಿ ವಿದ್ಯಾರಶ್ಮಿ ಪೆಲತ್ತಡ್ಕ, ಸಾಹಿತಿ ಡಾ. ಸತ್ಯಮಂಗಲ ಮಹಾದೇವ, ಸಾಹಿತಿ ಶ್ರೀ ಹನುಮಂತ ಸೋಮನಕಟ್ಟಿ ಮತ್ತು ಸಾಹಿತಿ ಶ್ರೀ ಗುಡ್ಡಪ್ಪ ಬೆಟಗೇರಿ ಅವರಿಗೆ “ಮಯೂರ ವರ್ಮ ಸಾಹಿತ್ಯ ಪ್ರಶಸ್ತಿ” ಪ್ರದಾನ ಮಾಡಲಾಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಲಲಿತಮ್ಮ ಚಂದ್ರಶೇಖರ್ ಅವರ ‘ನೆನಪಿನ ಉಗ್ರಾಣ’ ಕೃತಿ ಬಿಡುಗಡೆ
    Next Article ಮಂದಾರ ‘ರಂಗೋತ್ಸವ-2023’
    roovari

    1 Comment

    1. ವಿನುತಾ ಹಂಚಿನಮನಿ on April 2, 2023 11:08 am

      ವಾವ್! ಚೆನ್ನಾಗಿದೆ

      Reply

    Add Comment Cancel Reply


    Related Posts

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ

    February 26, 2026

    ಉಷಾ ಕೆ.ವಿ. ಇವರ ‘ವೇದಾಂತ’ ಹಾಗೂ ‘ಸ್ಪಂದನ’ ಕೃತಿಗಳ ಲೋಕಾರ್ಪಣಾ ಸಮಾರಂಭ

    February 26, 2026

    ಸುಳ್ಳದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ವಿಚಾರಗೋಷ್ಠಿ

    February 26, 2026

    ಪುಸ್ತಕ ವಿಮರ್ಶೆ | ಪೌರಾಣಿಕ ಕಥೆಗಳಲ್ಲಿ ಆಸಕ್ತಿ ಮೂಡಿಸುವ ‘ಕಿರಿಯರ ಸಚಿತ್ರ ರಾಮಾಯಣ’

    February 26, 2026

    1 Comment

    1. ವಿನುತಾ ಹಂಚಿನಮನಿ on April 2, 2023 11:08 am

      ವಾವ್! ಚೆನ್ನಾಗಿದೆ

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.