ಕಾಸರಗೋಡು : ಕಾಸರಗೋಡು ನುಳ್ಳಿಪ್ಪಾಡಿ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಹಾಗೂ ದ್ರಾವಿಡ ಭಾಷಾ ಅನುವಾದಕರ ಸಂಘ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಮಲಯಾಳಂ – ಕನ್ನಡ ಅನುವಾದ ಕಾರ್ಯಾಗಾರ ಕಾರ್ಯಕ್ರಮವು ದಿನಾಂಕ 09 ಮಾರ್ಚ್ 2025ರಂದು ಕಾಸರಗೋಡಿನ ನುಳ್ಳಿಪ್ಪಾಡಿ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ನಡೆಯಿತು.
ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾ ರಾಣಿ ಟೀಚರ್ ಇವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಸ್ .ಎಲ್. ಭೈರಪ್ಪ ಅವರ ‘ಯಾನ’ ಕಾದಂಬರಿಯನ್ನು ಕನ್ನಡದಿಂದ ಮಲಯಾಳಂ ಭಾಷೆಗೆ ಅನುವಾದ ಮಾಡಿ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿಗೆ ಭಾಜನರಾದ ಕಾಸರಗೋಡಿನ ಕೆ. ವಿ. ಕುಮಾರನ್ ಅವರಿಗೆ ಕಾಸರಗೋಡು ಕನ್ನಡ ಭವನದ ವತಿಯಿಂದ ಗೌರವ ಅಭಿನಂದನೆ ನೀಡಿ ಗೌರವಿಸಲಾಯಿತು.
ಗೌರವ ಅಧ್ಯಕ್ಷರಾದ ಪತ್ರಕರ್ತ ಪ್ರದೀಪ್ ಬೇಕಲ್ ಅಭಿನಂದನಾ ಪತ್ರ ನೀಡಿ, ನಿಕಟಪೂರ್ವ ಅಧ್ಯಕ್ಷ ಸಾಹಿತಿ ರಾಧಾಕೃಷ್ಣ ಕೆ. ಉಳಿಯತಡ್ಕ ಶಾಲು ಹೊದಿಸಿ, ಸ್ಥಾಪಕ ಅಧ್ಯಕ್ಷರಾದ ವಾಮನ್ ರಾವ್ ಬೇಕಲ್ ಸ್ಮರಣಿಕೆ ನೀಡಿ, ಮಲಯಾಳಂ ಸಾಹಿತಿ ರವೀಂದ್ರನ್ ಪಾಡಿ ಅಭಿನಂದನಾ ಭಾಷಣ ಮಾಡಿದರು.
ಡಿ. ಬಿ. ಟಿ. ಎ. ಅಧ್ಯಕ್ಷೆಯಾದ ಡಾ. ಸುಷ್ಮಾ ಶಂಕರ್ ಬೆಂಗಳೂರು, ಕನ್ನೂರು ವಿ. ವಿ. ಸೆನೆಟ್ ಸದಸ್ಯರಾದ ಡಾ. ರತ್ನಾಕರ ಮಲ್ಲಮೂಲೆ, ಕುಪ್ಪಮ್ ಯೂನಿವರ್ಸಿಟಿಯ ಪ್ರೊ. ಹಿರಣ್ಯ ಶಿವಕುಮಾರ್, ಡಿ. ಬಿ. ಟಿ. ಎ. ಇದರ ಪ್ರಧಾನ ಕಾರ್ಯದರ್ಶಿ ಡಾ. ರೋಷನ್, ಕೆ. ವಿ. ಕುಮಾರನ್ ಇವರಿಗೆ 2024ರಲ್ಲಿ ಸಮಗ್ರ ಸಾಹಿತ್ಯ ವಿಭಾಗದಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಡಾ. ಕೋಟ ಶಿವರಾಮ ಕಾರಂತರ “ಚೋಮನ ದುಡಿ “ಮಲಯಾಳಕ್ಕೆ ಅನುವಾದ ಮಾಡಿದ ಮಲಯಾಳಂ ಕೃತಿಯ ಮೂರು ಲಕ್ಷಕ್ಕೂ ಅಧಿಕ ಪ್ರತಿಗಳು ಚಲಾವಣೆಯಾಗಿತ್ತು.
Subscribe to Updates
Get the latest creative news from FooBar about art, design and business.
Previous Articleಬೆಂಗಳೂರಿನ ಬಸವನಗುಡಿಯಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಮಾರ್ಚ್ 13