ಕಲಬುರಗಿ : ವಿಶ್ವರಂಗ (ರಿ.) ಕಲಬುರಗಿ ಇದರ ವತಿಯಿಂದ ‘ಚಿಣ್ಣರ ಮೇಳ 2025’ ಹತ್ತು ಹಲವು ಸೃಜನಾತ್ಮಕ ಚಟುವಟಿಕೆಗಳೊಂದಿಗೆ ಮಕ್ಕಳ ಬೇಸಿಗೆ ಶಿಬಿರವನ್ನು ದಿನಾಂಕ 10 ಏಪ್ರಿಲ್ 2025ರಿಂದ 05 ಮೇ 2025ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 4-30 ಗಂಟೆಗೆ ತನಕ ಕಲಬುರಗಿಯ ಜಗತ್, ಲೇಕ್ ರೋಡ್, ಕಾರ್ಪೊರೇಷನ್ ಹತ್ತಿರ, ಎಂ.ಎಂ.ಕೆ. ಕಾಲೇಜ್ ಆಫ್ ವಿಷುವಲ್ ಆರ್ಟ್ ಇಲ್ಲಿ ಆಯೋಜಿಸಲಾಗಿದೆ.
ಅನುಭವಿ ರಂಗ ನಿರ್ದೇಶಕ ಡಾ. ವಿಶ್ವರಾಜ್ ಪಾಟೀಲ್ ಇವರ ಸಾರಥ್ಯದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ 5 ರಿಂದ 15 ವರ್ಷದ ಮಕ್ಕಳು ಭಾಗವಹಿಸಬಹುದು. ನಾಟಕ, ಸಂಗೀತ, ನೃತ್ಯ, ಕರಕುಶಲ ಕಲೆ, ಚಿತ್ರಕಲೆ, ಅಜ್ಜಿ ಕಥೆಗಳು, ದೇಸಿ ಸಂತೆ, ವಾದ್ಯ ಮೇಳ, ಮೂಕಾಭಿನಯ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಪ್ರದರ್ಶನ ಮುಂತಾದ ಚಟುವಟಿಕೆಗಳನ್ನು ನಡೆಸಲಾಗುವುದು. ನೋಂದಾವಣೆ ಮತ್ತು ಹೆಚ್ಚಿನ ಮಾಹಿತಿಗಾಗಿ 9901495905 ಮತ್ತು 8660926667 ಮತ್ತು 7022220144 ಸಂಖ್ಯೆಗಳನ್ನು ಸಂಪರ್ಕಿಸಿರಿ.