ಗದಗ : ಆಕಾಶವಾಣಿ ದೂರದರ್ಶನ ಕಲಾವಿದೆ ವಿದುಷಿ ಡಾ. ಸುಮಾ ಬಸವರಾಜ ಹಡಪದ ಬೆಳ್ಳಿಗಟ್ಟಿ ಧಾರವಾಡ ಇವರನ್ನು ರಜತ ಮಹೋತ್ಸವ ಸಂಭ್ರಮ ಹೊಸ್ತಿಲಲ್ಲಿ ಇರುವ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ.) ಗದಗ ಸಂಸ್ಥೆಯ ರಾಜ್ಯ ಸಂಚಾಲಕಿಯಾಗಿ ನೇಮಕ ಮಾಡಲಾಗಿದೆ ಎಂದು ಸಂಸ್ಥಾಪಕ ವೇ. ಚನ್ನವೀರಸ್ವಾಮಿ ಹಿರೇಮಠ ಕಡಣಿ ಗದಗ ಇವರು ತಿಳಿಸಿದ್ದಾರೆ.
ಡಾ. ಸುಮಾ ಹಡಪದ ವೀರೇಶ್ವರ ಪುಣ್ಯಾಶ್ರಮದ ಪರಂಪರೆಯ ಪ್ರಶಿಷ್ಯರು. ಇವರ ತಂದೆ ಮಹಾಲಿಂಗರಾಜ ಬುವ ಪುಟ್ಟರಾಜ ಗವಾಯಿಗಳ ಶ್ರೇಷ್ಠ ಶಿಷ್ಯರಲ್ಲಿ ಒಬ್ಬರು. ತಂದೆಯೇ ಗುರುವಾಗಿ ಸ್ವೀಕರಿಸಿ ಬಾಲ ಪ್ರತಿಭೆಯಾಗಿ ತಂದೆಯ ಪ್ರಿಯ ಶಿಷ್ಯಳಾಗಿ ಅಪಾರ ಸಂಗೀತ ಜ್ಞಾನ ಸಂಪಾಡಿಸಿಕೊಂಡಿದ್ದಾರೆ. ಸಂಗೀತದಲ್ಲಿ ವಿದ್ವತ್ ಪದವೀಧರೆ, ಆಕಾಶವಾಣಿ, ದೂರದರ್ಶನ ಮಾನ್ಯತೆ ಪಡೆದ ಕಲಾವಿದೆ. ಪ್ರಸ್ತುತ ಹಳಿಯಾಳದಲ್ಲಿ ಪ್ರಾಥಮಿಕ ಶಾಲೆಯ ವಿಷಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಂಗೀತದ ಜರ್ನಿಯನ್ನು ಆಕಾಶವಾಣಿ ಧಾರವಾಡ ಪ್ರಸಾರ ಮಾಡಿದೆ. ಪತಿ ಬಸವರಾಜ ಸಂಗೀತ ಪ್ರೇಮಿ, ಹವ್ಯಾಸಿ ಗಾಯಕ, ಶಿಕ್ಷಕ ಉತ್ತರ ಕನ್ನಡ ಜಿಲ್ಲೆ ಮತ್ತು ಧಾರವಾಡ ಜಿಲ್ಲೆಯಲ್ಲಿ ಸಂಗೀತ ಉಳಿಸಿ ಬೆಳೆಸುವಲ್ಲಿ ಸಮರ್ಪಿಸಿಕೊಂಡ ಕುಟುಂಬವೆಂಬ ಹೆಸರು ಮಾಡಿದ್ದಾರೆ. ಇವರು ಸಂಚಾಲಕರಾಗಿ ಗುರು ಸೇವೆ ಸಲ್ಲಿಸುವ ಭಾಗ್ಯ ಇವರದ್ದಾಗಿದೆ. ಇವರ ಅಧಿಕಾರದ ಅವಧಿ 2 ವರ್ಷ ಅಥವಾ ಸಂಸ್ಥಾಪಕರು ಒಪ್ಪುವವರೆಗೆ ಇರುತ್ತದೆ. ಇವರ ಅಧಿಕಾರವು ಇಂದಿನಿಂದಲೇ ಜಾರಿಯಲ್ಲಿ ಇರುತ್ತದೆ ಎಂದು ಆದೇಶ ಪತ್ರದಲ್ಲಿ ಸಂಸ್ಥಾಪಕರು ತಿಳಿಸಿದ್ದಾರೆ.