ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2022 ಹಾಗೂ 2023ನೇ ಸಾಲಿನ ಪುಸ್ತಕ ಪ್ರಶಸ್ತಿ ಹಾಗೂ ದತ್ತಿ ನಿಧಿ ಪುಸ್ತಕ ಪುರಸ್ಕಾರವನ್ನು ಪ್ರಕಟಿಸಿದೆ.
ನಾಲ್ಕು ಮಂದಿ ಲೇಖಕರಿಗೆ ವಾರ್ಷಿಕ ಪುಸ್ತಕ ಬಹುಮಾನ ಹಾಗೂ 6 ಮಂದಿ ಲೇಖಕರಿಗೆ ವಾರ್ಷಿಕ ದತ್ತಿ ನಿಧಿ ಪುಸ್ತಕ ಬಹುಮಾನ ನೀಡಲಾಗುತ್ತಿದೆ.
2022ನೇ ಸಾಲಿನ ತುಳು ಕವನ ವಿಭಾಗದ ಪುಸ್ತಕ ಬಹುಮಾನಕ್ಕೆ ಪತ್ರಕರ್ತ ರಾಜೇಶ್ ಶೆಟ್ಟಿ ದೋಟ ಇವರ ‘ಮುಗದಾರಗೆ’ ಕವನ ಸಂಕಲನ ಹಾಗೂ 2023ನೇ ಸಾಲಿನ ತುಳು ಕವನ ವಿಭಾಗಕ್ಕೆ ರಘು ಇಡೀದು ಇವರ ‘ಎನ್ನ ನಲಿಕೆ’ ಕವನ ಸಂಕಲನ ಆಯ್ಕೆಯಾಗಿದೆ. 2023ನೇ ಸಾಲಿನ ತುಳು ಕಾದಂಬರಿ ಬಹುಮಾನಕ್ಕೆ ರಾಜಶ್ರೀ ಟಿ. ರೈ ಪೆರ್ಲ ಇವರ ‘ಮುಸ್ರಾಲೋ ಪಟ್ಟೋ’ ಕಾದಂಬರಿ ಹಾಗೂ 2023ನೇ ಸಾಲಿನ ತುಳು ಅನುವಾದ ವಿಭಾಗದ ಪುಸ್ತಕ ಬಹುಮಾನಕ್ಕೆ ಕುಶಲಾಕ್ಷಿ ವಿ. ಕುಲಾಲ್ ಇವರ ‘ತಗೊರಿ ಮಿತ್ತ ಮಣ್’ ಅನುವಾದ ಕೃತಿ ಆಯ್ಕೆಯಾಗಿದೆ. ಈ ಪುಸ್ತಕ ಪ್ರಶಸ್ತಿಗಳು ರೂಪಾಯಿ 25000 ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
2022ನೇ ಸಾಲಿನ ಉಷಾ ಪಿ. ರೈ ದತ್ತಿ ನಿಧಿ ಪ್ರಶಸ್ತಿಗೆ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಇವರ ‘ತುಳು ಕಾವ್ಯ ಮೀಮಾಂಸೆ’ ಕೃತಿ ಹಾಗೂ 2023ನೇ ಸಾಲಿನ ಉಷಾ ಪಿ. ರೈ ದತ್ತಿನಿಧಿ ಪ್ರಶಸ್ತಿಗೆ ಡಾ. ಚಿನ್ನಪ್ಪ ಗೌಡ ಇವರ ‘ಕರಾವಳಿ ಕಥನ’ ಕೃತಿಯು ಆಯ್ಕೆಯಾಗಿದೆ.
2022ನೇ ಸಾಲಿನ ದಿ. ಕೆ. ಅಮರನಾಥ ಶೆಟ್ಟಿ ದತ್ತಿ ಪ್ರಶಸ್ತಿಗೆ ಯಶೋದ ಮೋಹನ್ ಇವರ ‘ದೇರ ಮಾಮುನ ದೂರ ನೋಟೊಲು’ ಕೃತಿ ಹಾಗೂ 2023ನೇ ಸಾಲಿನ ದಿ. ಕೆ ಅಮರನಾಥ ಶೆಟ್ಟಿ ದತ್ತಿ ಪ್ರಶಸ್ತಿಗೆ ಡಾ. ವಿ. ಕೆ. ಯಾದವ್ ಇವರ ‘ಮೊಗವೀರರ್ನ ಸಾಂಸ್ಕೃತಿಕ ಬದ್‌ಕ್ ಬೊಕ್ಕ ಆರ್ಥಿಕ ಚಿಂತನೆ’ ಕೃತಿ ಆಯ್ಕೆಯಾಗಿದೆ.
2022ನೇ ಸಾಲಿನ ದಿ. ಶಿವಾನಂದ ಕರ್ಕೇರ ದತ್ತಿನಿಧಿ ಪ್ರಶಸ್ತಿಗೆ ಶಾರದಾ ಅಂಚನ್ ಇವರ ‘ನಂಬಿ ಸತ್ಯೋಲು’ ಕೃತಿ ಹಾಗೂ 2023ನೇ ಸಾಲಿನ ದಿ. ಶಿವಾನಂದ ಕರ್ಕೇರ ದತ್ತಿನಿಧಿ ಪ್ರಶಸ್ತಿಗೆ ರಘುನಾಥ ವರ್ಕಾಡಿ ಇವರ ‘ಸೂರ್ಯ ಚಂದ್ರ ಸಿರಿ’ ಕೃತಿ ಆಯ್ಕೆಯಾಗಿದೆ. ಈ ದತ್ತಿನಿಧಿ ಪ್ರಶಸ್ತಿಗಳು ರೂಪಾಯಿ 10,000 ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 15 ಮಾರ್ಚ್ 2025 ರಂದು ಬೆಳಿಗ್ಗೆ ಘಂಟೆ 10.00ಕ್ಕೆ ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ತುಳು ಭವನದಲ್ಲಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಹಾಗೂ ದತ್ತಿ ನಿಧಿ ಪುಸ್ತಕ ಪುರಸ್ಕಾರ ಪ್ರಕಟ
No Comments2 Mins Read
Previous Articleಗೋವಾದಲ್ಲಿ ಮೇಳೈಸಿದ ‘ಯಕ್ಷ ಶರಧಿ’
Next Article ಕಟೀಲಿನಲ್ಲಿ ರಾಷ್ಟ್ರೀಯ ತುಳು ವಿಚಾರ ಸಂಕಿರಣ | ಮಾರ್ಚ್ 16