ಉಡುಪಿ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀಮತಿ ಮತ್ತು ಶ್ರೀ ಗೋಪಾಲಕೃಷ್ಣ ಭಟ್ ಇವರ ಉಡುಪಿಯ “ಈಶಾವಾಸ್ಯ” ಮನೆಯಲ್ಲಿ ಉಡುಪಿ ಶ್ರೀ ಕೃಷ್ಣ ಮಠದ ಭಾವಿ ಪರ್ಯಾಯದ ಶಿರೂರು ಮಠಾಧೀಶರರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದರ ಭೀಕ್ಷಾಸೇವಾ ಅಂಗವಾಗಿ ‘ಭೀಷ್ಮಾರ್ಜುನ’ ( ಕರ್ಮಬಂಧ ) ಯಕ್ಷಗಾನ ತಾಳಮದ್ದಳೆ ದಿನಾಂಕ 12 ಮಾರ್ಚ್ 2025 ರಂದು ನಡೆಯಿತು .
ಹಿಮ್ಮೇಳದಲ್ಲಿ ನಾರಾಯಣ ಶಬರಾಯ , ಪದ್ಯಾಣ ಜಯರಾಮ್ ಭಟ್ , ಮುರಳೀಧರ ಕಲ್ಲೂರಾಯ ಕುಂಜೂರು ಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣನಾಗಿ ಕಿಶೋರಿದುಗ್ಗಪ್ಪ ನಡುಗಲ್ಲು, ಭೀಷ್ಮನಾಗಿ ಶುಭಾ ಜೆ. ಸಿ. ಅಡಿಗ, ಅರ್ಜುನನಾಗಿ ಹರಿಣಾಕ್ಷಿ ಜೆ. ಶೆಟ್ಟಿ ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ಶ್ರೀ ಮತಿ ಶಾಂತಲಾ ಮತ್ತು ಶ್ರೀಗೋಪಾಲಕೃಷ್ಣ ಭಟ್ ಕಲಾವಿದರನ್ನು ಗೌರವಿಸಿ ವಂದಿಸಿದರು. ಶ್ರಿಮತಿ ರಾಜಶ್ರೀ ಮತ್ತು ಶ್ರೀ ನಾರಾಯಣ ಶಬರಾಯ ಸಹಕರಿಸಿದರು.