ದೆಹಲಿ : ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ‘ಫೆಸ್ಟಿವಲ್ ಆಫ್ ಲೆಟರ್ಸ್’ ಸಾಹಿತ್ಯೋತ್ಸವ ಕಾರ್ಯಕ್ರಮ ದೆಹಲಿಯ ರವೀಂದ್ರ ಭವನದಲ್ಲಿ ಮಾರ್ಚ್ 7ರಿಂದ 12ರ ತನಕ ಆಯೋಜಿಸಿದ್ದು ದೇಶದ 50ಕ್ಕೂ ಮಿಕ್ಕಿದ ಬೇರೆ ಬೇರೆ ಭಾಷೆಗಳ ಸಾಹಿತಿಗಳನ್ನು ಆಹ್ವಾನಿಸಿತ್ತು. ಈ ಬಾರಿ ತುಳು ಭಾಷೆಯಿಂದ ಅಕ್ಷತಾ ರಾಜ್ ಪೆರ್ಲ ಹಾಗೂ ಆತ್ರಾಡಿ ಅಮೃತಾ ಶೆಟ್ಟಿಯವರನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಆಯ್ಕೆ ಮಾಡಿದೆ.
ದಿನಾಂಕ 11 ಮಾರ್ಚ್ 2025ರಂದು ಹಿರಿಯ ಸಾಹಿತಿಗಳಾದ ಕಿರಣ್ ಕುಮಾರ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಟೇಸ್ಟಿ ರೌಂಡ್ – ಉತ್ತರ ಪೂರ್ವ ಹಾಗೂ ದಕ್ಷಿಣಾದಿ ಕವಿಗೋಷ್ಠಿಯಲ್ಲಿ ಅಕ್ಷತಾ ರಾಜ್ ಪೆರ್ಲ ಅವರು ತಮ್ಮ ತುಳು ಕವಿತೆಗಳನ್ನು ತುಳು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಸ್ತುತಪಡಿಸಿದ್ದಾರೆ. ಈ ತನಕ ತುಳು ಮತ್ತು ಕನ್ನಡದಲ್ಲಿ ಒಟ್ಟು 13 ಕೃತಿಗಳನ್ನು ರಚಿಸಿದ್ದು, ಈ ಮೊದಲು ಮೈಸೂರು ದಸರಾ ಕವಿಗೋಷ್ಠಿಯಲ್ಲೂ ತುಳು ಭಾಷೆಯ ಪ್ರತಿನಿಧಿಯಾಗಿ ಭಾಗವಹಿಸಿರುತ್ತಾರೆ.
Subscribe to Updates
Get the latest creative news from FooBar about art, design and business.
‘ಫೆಸ್ಟಿವಲ್ ಆಫ್ ಲೆಟರ್ಸ್’ ಸಾಹಿತ್ಯೋತ್ಸವದ ಕವಿಗೋಷ್ಠಿಯಲ್ಲಿ ಅಕ್ಷತಾ ರಾಜ್ ಪೆರ್ಲ ಹಾಗೂ ಆತ್ರಾಡಿ ಅಮೃತಾ ಶೆಟ್ಟಿ
No Comments1 Min Read
Previous Articleಉಡುಪಿಯ ‘ಈಶಾವಾಸ್ಯ’ದಲ್ಲಿ ‘ಭೀಷ್ಮಾರ್ಜುನ’ ಯಕ್ಷಗಾನ ತಾಳಮದ್ದಳೆ