ತೆಕ್ಕಟ್ಟೆ : ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ, ಇದರ ಸಿನ್ಸ್ 1999 ಶ್ವೇತಯಾನದ ಅಂಗವಾಗಿ ಧಮನಿ ಟ್ರಸ್ಟ್ (ರಿ.), ತೆಕ್ಕಟ್ಟೆ ಹಾಗೂ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸುವ ರಜಾ ರಂಗು -2025 ‘ಚಂದಕ್ಕಿ ಬಾರೆ ಕತೆ ಹೇಳೆ’ ಮಕ್ಕಳ ಬೇಸಿಗೆ ಶಿಬಿರವು ದಿನಾಂಕ 11 ಏಪ್ರಿಲ್ 2025 ರಿಂದ 04 ಮೇ 2025ರ ವರೆಗೆ ತೆಕ್ಕಟ್ಟೆಯ ಮಾದರಿ ಶಿಶುಮಂದಿ ನಿಸರ್ಗದಲ್ಲಿ ನಡೆಯಲಿದೆ
ಖ್ಯಾತ ರಂಗಕರ್ಮಿ ಡಾ. ಶ್ರೀ ಪಾದ್ ಭಟ್ ಇವರ ನಿರ್ದೇಶನದಲ್ಲಿ 8 ರಿಂದ 16 ವರ್ಷದ ಒಳಗಿನ ಮಕ್ಕಳಿಗಾಗಿ ನಡೆಯಲಿರುವ ಈ ಶಿಬಿರದಲ್ಲಿ ಕಥಾಭಿನಯ, ಕಾವ್ಯಾಭಿನಯ, ನೃತ್ಯರೂಪಕ, ನಾಟಕಗಳು, ಚಿತ್ರಬರೆ, ಕವನ ರಚನೆ, ಆಕಾಶ ವೀಕ್ಷಣೆ, ಮಕ್ಕಳ ಅದಾಲತ್-ಸಂವಾದ (ಪಾಲಕರೊಂದಿಗೆ, ವೈದ್ಯರೊಂದಿಗೆ), ಪರಿಸರ ಅಧ್ಯಯನ, ಮಕ್ಕಳ ಸಂತೆ ಮುಂತಾದವು ನಡೆಯಲಿದೆ.

