ಮೈಸೂರು : ‘ಥೇಮಾ’ ಥಿಯೇಟರ್ ಪ್ರಸ್ತುತ ಪಡಿಸುವ ಡಾ. ಎಸ್.ವಿ. ಸುಷ್ಮಾ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಎಲ್.ಎಸ್.ಡಿ.’ ಕನ್ನಡ ನಾಟಕ ಪ್ರದರ್ಶನವನ್ನು ದಿನಾಂಕ 16 ಮಾರ್ಚ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ನಟನ ರಂಗ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕದ ಪರಿಕಲ್ಪನೆ ಹಾಗೂ ನಟನೆ ಸುನೇತ್ರಾ ಪಂಡಿತ, ಸ್ನೇಹ ಕಪ್ಪಣ್ಣ ಮತ್ತು ಡಾ. ಎಸ್.ವಿ. ಸುಷ್ಮಾ ಇವರು ನಿರ್ವಹಿಸಿದ್ದು, ಡಾ. ಎಸ್.ವಿ. ಕಶ್ಯಪ್ ಪರಿಕಲ್ಪನೆ ಹಾಗೂ ರಚನೆ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777 ಸಂಖ್ಯೆಯನ್ನು ಸಂಪರ್ಕಿಸಿರಿ.