ಪುತ್ತೂರು : ಪುತ್ತೂರಿನ ಸರ್ವೆ ಬಳಿಯ ಮೇಗಿನಗುತ್ತು ತರವಾಡು ಮನೆಯ ಶ್ರೀ ನಾಗ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಮೇಗಿನಗುತ್ತು ಮನೆಯಲ್ಲಿ ದಿನಾಂಕ 14 ಮಾರ್ಚ್ 2025ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ತಾಳಮದ್ದಳೆ ಕಾರ್ಯಕ್ರಮವು ಗಣೇಶ್ ಕೊಲೆಕ್ಕಾಡಿ ವಿರಚಿತ ‘ಸಮರ ಸೌಗಂಧಿಕಾ’ ಎಂಬ ಆಖ್ಯಾನದೊಂದಿಗೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯ ಶ್ರೀ ಕುಲ್ಕುಂದ, ಭರತ್ ರಾಜ್ ಶೆಟ್ಟಿ ಸಿದ್ಧಕಟ್ಟೆ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಪದ್ಯಾಣ ಜಯರಾಮ ಭಟ್ ಹಾಗೂ ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ಭೀಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ದ್ರೌಪದಿ), ಹರಿಣಾಕ್ಷಿ ಜೆ. ಶೆಟ್ಟಿ (ಹನೂಮಂತ), ಶಾರದಾ ಅರಸ್ (ಕುಬೇರ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಶಿವನಾಥ ರೈ ಮೇಗಿನಗುತ್ತು ವಂದಿಸಿದರು. ವಿಶ್ವನಾಥ್ ರೈ, ಯೋಗಿನಿ ರೈ ಮತ್ತು ಮೇಗಿನಗುತ್ತು ತರವಾಡು ಮನೆಯವರು ಕಲಾವಿದರಿಗೆ ಶಾಲು ಹೊದಿಸಿ ಗೌರವಿಸಿದರು.