ಉಡುಪಿ : ರಂಗ ಭಾಷೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ಕಲಾವಿದರುಗಳಿಗೆ ಹಾಗೂ ರಂಗಾಸಕ್ತರಿಗೆ ಮತ್ತೊಂದು ಹೆಜ್ಜೆ. ಪ್ರೇಕ್ಷಕರು – ವೀಕ್ಷಕರು ಮರೆಯಲಾಗದ ಕಲಾವಿದರಾಗ ಬಯಸುವ ಮನಗಳಿಗೆ, ಒಂದಷ್ಟು ಶಕ್ತಿ – ಬಣ್ಣ ತುಂಬಿ, ಅದ್ಭುತ ಕಲಾವಿದರಾಗಬೇಕೆಂಬ ಆಸೆಯನ್ನು ತನ್ನೊಳಗೆ ತುಂಬಿಕೊಂಡಿರುವ ಆಸಕ್ತರಿಗೆ, ಆ ಯಶಸ್ಸಿನ ದಾರಿಯ ಹುಡುಕಾಟಕ್ಕೆ ಇಂಬು ಕೊಡುವ ಪ್ರಕ್ರಿಯೆ…. ಎರಡು ದಿನಗಳ ವಿವಿಧ ರಂಗ ತರಬೇತಿಯ ಸರಣಿ ಕಾರ್ಯಾಗಾರವು ಉಡುಪಿ ರಂಗಭೂಮಿ (ರಿ.) ವತಿಯಿಂದ ದಿನಾಂಕ 29 ಮತ್ತು 30 ಮಾರ್ಚ್ 2025ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ.
ಹೆಸರಾಂತ ರಂಗ ನಿರ್ದೇಶಕ, ಝೀ ಟಿವಿಯ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಮತ್ತು ರಂಗಭೂಮಿಯು ಆಯೋಜಿಸುವ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಮೂರು ಬಾರಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ವಿಜೇತ ಶ್ರೀ ಮಂಜುನಾಥ ಎಲ್. ಬಡಿಗೇರ್ ಇವರಿಂದ ಎರಡು ದಿನಗಳ ಅಭಿನಯ ಕೇಂದ್ರಿತ ರಂಗ ತರಬೇತಿ ಶಿಬಿರ. ಎರಡು ದಿನಗಳ ರಂಗ ತರಬೇತಿ ಶಿಬಿರದಲ್ಲಿ ಭಾಗವಹಿಸಲು, ಊಟೋಪಚಾರ ಸೇರಿದಂತೆ ನೋಂದಣಿ ಶುಲ್ಕ ₹ 500/-. ಈ ಶಿಬಿರದ ಯಾವುದೇ ಮಾಹಿತಿ ಬೇಕಿದ್ದರೆ ಇವರಲ್ಲಿ ಯಾರನ್ನಾದರಖ ಸಂಪರ್ಕಿಸಿ.
ಪ್ರದೀಪ್ ಚಂದ್ರ ಕುತ್ಪಾಡಿ – 9448952847
ಶ್ರೀಪಾದ್ ಹೆಗಡೆ – 9845111449
ವಿವೇಕಾನಂದ ಎನ್. – 8660179220
ರವಿರಾಜ ನಾಯಕ್ – 9845345410
ಡಾ. ವಿಷ್ಣುಮೂರ್ತಿ ಪ್ರಭು – 9108587192
ಅಮಿತಾಂಜಲಿ ಕಿರಣ್ – 9886452040
ರೇವತಿ ನಾಡಗೀರ – 8762563517
ರಾಘವ ಬಿ – 8660515781
ಶಿಬಿರದಲ್ಲಿ ಭಾಗವಹಿಸಲು ಸಂಸ್ಥೆಯ ಆಡಳಿತ ಮಂಡಳಿಯ ವಿಶೇಷ ಆಹ್ವಾನಿತ ಸದಸ್ಯರಾದ ಶ್ರೀ ಸೂರ್ಯ ಪ್ರಕಾಶ್ – 7795291485 ಇವರಿಗೆ ₹500/- ಗೂಗಲ್ ಪೇ ಮಾಡಿ ಹಾಗೂ ಅವರಿಗೆ ನಿಮ್ಮ ಹೆಸರು, ವಿಳಾಸ ಮತ್ತು ಗೂಗಲ್ ಪೇ ಮಾಡಿರುವುದರ (ಸ್ಕ್ರೀನ್ ಶಾಟ್) ಮಾಹಿತಿಯನ್ನು ಆದಷ್ಟು ಬೇಗ ನೀಡಿ ನೋಂದಾಯಿಸಿಕೊಳ್ಳಿ. ಗಮನಿಸಿ – ಮೊದಲು ನೋಂದಾಯಿಸಿದವರಿಗೆ ಆದ್ಯತೆ).
ಶಿಬಿರದ ಸಮಯ : ಬೆಳಿಗ್ಗೆ 9-00 ರಿಂದ ಸಂಜೆ 7-00 ಗಂಟೆ ತನಕ (ಶಿಬಿರದ ನಿರ್ದೇಶಕರು ಅವಶ್ಯಕತೆ ಕಂಡರೆ ನಿಗದಿತ ಸಮಯದಲ್ಲಿ ಬದಲಾವಣೆ ಮಾಡಬಹುದು)
# ಪ್ರಥಮ ದಿನ ಬಂದಾಗ ನೀವು ಗೂಗಲ್ ಪೇ ಮಾಡಿರು ಮಾಹಿತಿ ಹಾಗೂ ನಿಮ್ಮ ಒಂದು ಪಾಸ್ ಪೋರ್ಟ್ ಸೈಜ್ ಫೋಟೋವನ್ನು ಭರ್ತಿ ಮಾಡಿದ ಅರ್ಜಿಯೊಂದಿಗೆ ನೀಡಿ.
# ಪ್ರತಿದಿನ ಬೆಳಿಗ್ಗೆ ಗಂಟೆ 8-45ಕ್ಕೆ ಕಡ್ಡಾಯವಾಗಿ ಉಪಸ್ಥಿತರಿರಬೇಕು.
# ಶಿಬಿರಾರ್ಥಿಗಳಿಗೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಊಟ, ಸಂಜೆ ಲಘ ಉಪಹಾರ ನೀಡಲಾಗುವುದು.
# ವ್ಯಾಯಾಮ ಹಾಗೂ ಆಂಗಿಕ ಚಲನೆಗೆ ಅನುಕೂಲಕರ ಉಡುಪು ಧರಿಸಿರಿ.
# ಒಂದು ನೋಟ್ ಬುಕ್ ಹಾಗೂ ಪೆನ್ ನಿಮ್ಮ ಜೊತೆ ಇರಲಿ.
# ಎರಡೂ ದಿನ ಭಾಗವಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.