ಹೊಸನಗರ : ಹೊಂಬುಜ ಜೈನ ಮಠದ ಪ್ರಸಕ್ತ ಸಾಲಿನ ‘ಸಿದ್ಧಾಂತ ಕೀರ್ತಿ’ ಪ್ರಶಸ್ತಿಯನ್ನು ಕರ್ನಾಟಕ ಸಂಸ್ಕೃತ ವಿ. ವಿ. ಇದರ ವಿಶ್ರಾಂತ ಕುಲಪತಿ, ಸಾಹಿತಿ ಹಾಗೂ ಶಿಕ್ಷಣ ತಜ್ಞರಾದ ಮೈಸೂರಿನ ಪ್ರೊ. ಪದ್ಮಾ ಶೇಖರ್ ಇವರಿಗೆ ನೀಡಲಾಗುವುದು ಎಂದು ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಘೋಷಿಸಿದ್ದಾರೆ.
ಈ ಪ್ರಶಸ್ತಿಯು 51 ಸಾವಿರ ರೂ. ನಗದು ಪುರಸ್ಕಾರ ಹೊಂದಿದ್ದು, 21 ಮಾರ್ಚ್ 2025ರಂದು ಜರುಗುವ ಹೊಂಬುಜ ಮಠದ ವಾರ್ಷಿಕ ಮಹಾರಥ ಯಾತ್ರಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಕನ್ನಡ, ಸಂಸ್ಕೃತ, ಇಂಗ್ಲಿಷ್, ಪ್ರಾಕೃತ ಭಾಷೆ ಮತ್ತು ಜೈನ ಸಾಹಿತ್ಯ ಕುರಿತಂತೆ ವಿಶೇಷ ಅಧ್ಯಯನ ಮತ್ತು ಅಧ್ಯಾಪನಾ ನಡೆಸಿ ಸಾಹಿತ್ಯ ವಿಮರ್ಶೆ, ಸಂಶೋಧನೆ, ಕಾವ್ಯ, ಜೀವನ ಚರಿತ್ರೆ ಸೇರಿದಂತೆ ಬಹು ಸಾಹಿತ್ಯಿಕ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವರ ಮುಂದಾಳತ್ವದಲ್ಲಿ 6,000ಕ್ಕೂ ಹೆಚ್ಚು ಪ್ರಾಚೀನ ತಾಳಪತ್ರಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಪಿ. ಎಚ್. ಡಿ. ಸಂಶೋಧಕರಿಗೆ ಮಾರ್ಗದರ್ಶಕರಾಗಿ ಜೈನ ಸಾಹಿತ್ಯ, ಕನ್ನಡ ಸಾಹಿತ್ಯ, ಜಾನಪದ ಸಾಹಿತ್ಯಕ್ಕೆ ವಿಶೇಷ ಕೊಡುಗೆಯನ್ನು ನೀಡಿದ ಇವರು ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ನಿಧನ