ಉಡುಪಿ : ಕೊಡವೂರಿನ ಮಹತೋಭಾರ ಶ್ರೀ ಶಂಕರ ನಾರಾಯಣ ದೇವಸ್ಥಾನ ಮತ್ತು ನೃತ್ಯ ನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯ ಸರಣಿ ‘ನೃತ್ಯ ಶಂಕರ’ ಇದರ 88ನೇ ಕಾರ್ಯಕ್ರಮ ದಿನಾಂಕ 17 ಮಾರ್ಚ್ 2025ರಂದು ಸಂಜೆ ಘಂಟೆ 6.30 ರಿಂದ ಶ್ರೀ ಕ್ಷೇತ್ರದ ವಸಂತ ಮಂಟಪದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿದುಷಿ ಯುಕ್ತಿ ಉಡುಪ ಬಳ್ಕೂರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಯುಕ್ತಿ ಉಡುಪ :
ಶ್ರೀ ಬಿ. ರಾಘವ ಉಡುಪ ಹಾಗೂ ಶ್ರೀಮತಿ ಶ್ರೀ ಕಾಂತಿ ಉಡುಪ ಇವರ ಪುತ್ರಿಯಾದ ಯುಕ್ತಿ ಉಡುಪ ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ಗುರು ವಿದುಷಿ ಶ್ರೀಮತಿ ಪ್ರವಿತ ಅಶೋಕ್ ಇವರ ಬಳಿ ಕಳೆದ 12 ವರ್ಷಗಳಿಂದ ಭರತನಾಟ್ಯವನ್ನು ಅಭ್ಯಸಿಸುತ್ತಿದ್ದಾರೆ. 2022ರಲ್ಲಿ ವಿದ್ವತ್ ಅಂತಿಮವನ್ನು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ಇವರು ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂ. ಬಿ. ಎ. ಪದವಿಯನ್ನು ಪೂರೈಸಿದ್ದಾರೆ. ಕಳೆದ ವರ್ಷ ತನ್ನ ಸಹೋದರಿಯಾದ ಸುನಿಧಿ ಉಡುಪ ಇವರೊಂದಿಗೆ ಭರತನಾಟ್ಯ ರಂಗಪ್ರವೇಶವನ್ನು ಪೂರ್ಣಗೊಳಿಸಿ ಕಲಾ ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಅಪಾರ ಪ್ರಶಂಸೆಯನ್ನು ಗಳಿಸಿರುತ್ತಾರೆ.
ಕರ್ನಾಟಕ ಸಂಗೀತ ಮತ್ತು ನೃತ್ಯ ಶಿಷ್ಯವೇತನವನ್ನು ಭರತನಾಟ್ಯದಲ್ಲಿ ಪಡೆದು, ಅನೇಕ ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಹಾಗೂ ವಿಶ್ವವಿದ್ಯಾಲಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿರುತ್ತಾರೆ. “ನಾಟ್ಯ ಸಮ್ಮೋಹಿನಿ”, “ಯುವ ಕಲಾ ಪ್ರಶಸ್ತಿ“ , “ಕಲಾಶ್ರೀ ಪ್ರಶಸ್ತಿ“, “ಅರುಣೋದಯ ಪ್ರಶಸ್ತಿ“, “ಶುಕ್ರ ಯುವಸಿರಿ ಪ್ರಶಸ್ತಿ” ಹಾಗೂ ಹಲವಾರು ಪ್ರಶಸ್ತಿ ಬಿರುದುಗಳನ್ನು ಪಡೆದಿರುತ್ತಾರೆ.
ದೂರದರ್ಶನದ ‘ಬಿ’ ಗ್ರೇಡ್ ಕಲಾವಿದರಾದ ಇವರು ಚೆನ್ನೈನ ಪ್ರತಿಷ್ಠಿತ ವೇದಿಕೆಯಾದ ‘ಶ್ರೀ ಕೃಷ್ಣ ಗಾನ ಸಭಾ’ ಇವರ “ಇಳಮೈಯಿಲ್ ತೀರಮೈ 2025“ ಕಾರ್ಯಕ್ರಮದಲ್ಲಿ ಏಕವ್ಯಕ್ತಿ ನೃತ್ಯ ಪ್ರದರ್ಶನ ನೀಡಿರುತ್ತಾರೆ. ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಲ್ಲಿ ನೆಡೆದ ‘TEDxSJEC’ ಯಲ್ಲಿ ಪ್ರದರ್ಶನ ಹಾಗೆ ಮುಂತಾದ ವೇದಿಕೆಗಳಲ್ಲಿ ಏಕವ್ಯಕ್ತಿ ಹಾಗೂ ಸಮೂಹ ಪ್ರದರ್ಶನವನ್ನು ನೀಡಿರುತ್ತಾರೆ.
Subscribe to Updates
Get the latest creative news from FooBar about art, design and business.
‘ನೃತ್ಯ ಶಂಕರ’ 88ನೇ ಕಾರ್ಯಕ್ರಮದಲ್ಲಿ ವಿದುಷಿ ಯುಕ್ತಿ ಉಡುಪ ಬಳ್ಕೂರು ಇವರ ನೃತ್ಯ ಪ್ರದರ್ಶನ | ಮಾರ್ಚ್ 17
Previous Articleಪ್ರೊ. ಪದ್ಮಾ ಶೇಖರ್ ಇವರಿಗೆ ‘ಸಿದ್ಧಾಂತ ಕೀರ್ತಿ ಪ್ರಶಸ್ತಿ’