ಕಾರ್ಕಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷ ರಂಗಾಯಣ ಕಾರ್ಕಳ ಮತ್ತು ರಂಗಸಂಸ್ಕೃತಿ (ರಿ.) ಕಾರ್ಕಳ ಇವರ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ 11ನೇ ವರ್ಷದ ಬಿ. ಗಣಪತಿ ಪೈ ರಂಗೋತ್ಸವ ‘ಮಾಗಿ-ಸುಗ್ಗಿ ನಾಟಕ ಹಬ್ಬ’ ದಿನಾಂಕ 20 ಮಾರ್ಚ್ 2025ರಿಂದ 25 ಮಾರ್ಚ್ 2025ರವರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಕಾರ್ಕಳದ ಮಂಜುನಾಥ ಪೈ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 20 ಮಾರ್ಚ್ 2025ರಂದು ಹುಲುಗಪ್ಪ ಕಟ್ಟೆಮನಿ ಇವರ ನಿರ್ದೇಶನದಲ್ಲಿ ಧಾರವಾಡ ರಂಗಾಯಣ ಪ್ರಸ್ತುತ ಪಡಿಸುವ ನಾಟಕ ‘ಸತ್ತವರ ನೆರಳು’, ದಿನಾಂಕ 21 ಮಾರ್ಚ್ 2025ರಂದು ಶಕೀಲ್ ಅಹ್ಮದ್ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ವಿಜಯಪುರದ ಸ್ಪಿನ್ನಿಂಗ್ ಟ್ರೀ ಥಿಯೇಟರ್ ಕಂಪನಿ (ರಿ.) ಪ್ರಸ್ತುತ ಪಡಿಸುವ ‘ಅನಾಮಿಕನ ಸಾವು’, ದಿನಾಂಕ 22 ಮಾರ್ಚ್ 2025ರಂದು ಬಿ.ಎಸ್. ರಾಮ್ ಶೆಟ್ಟಿ ಹಾರಾಡಿ ಇವರ ನಿರ್ದೇಶನದಲ್ಲಿ ಹಾರಾಡಿಯ ಭೂಮಿಕಾ (ರಿ.) ತಂಡ ಅಭಿನಯಿಸುವ ‘ಬರ್ಬರೀಕ’, ದಿನಾಂಕ 23 ಮಾರ್ಚ್ 2025ರಂದು ಮಂಜು ಕೊಡಗು ಇವರ ನಿರ್ದೇಶನದಲ್ಲಿ ಭಳಿರೇ ವಿಚಿತ್ರಮ್ ತಂಡದ ಪ್ರಸ್ತುತಿ ‘ದಶಾನನ ಸ್ವಪ್ನಸಿದ್ಧಿ’, ದಿನಾಂಕ 24 ಮಾರ್ಚ್ 2025ರಂದು ಸಂತೋಷ್ ನಾಯಕ್ ಪಟ್ಲ ಇವರ ನಿರ್ದೇಶನದಲ್ಲಿ ಪಟ್ಲದ ಭೂಮಿಗೀತ ಸಾಂಸ್ಕೃತಿಕ ವೇದಿಕೆಯವರು ‘ದಿ ಫೈಯರ್’ ನಾಟಕ ಹಾಗೂ ದಿನಾಂಕ 25 ಮಾರ್ಚ್ 2025ರಂದು ಬಿ.ಎಸ್. ರಾಮ್ ಶೆಟ್ಟಿ ಹಾರಾಡಿ ಇವರ ನಿರ್ದೇಶನದಲ್ಲಿ ಹಾರಾಡಿಯ ಭೂಮಿಕಾ (ರಿ.) ತಂಡದವರು ‘ಸೂರ್ಯಸ್ತದಿಂದ ಸೂರ್ಯೋದಯದವರೆಗೆ’ ನಾಟಕ ಪ್ರದರ್ಶನ ನೀಡಲಿದ್ದಾರೆ.