ಕುಂದಾಪುರ : ಸಂಗೀತ ಭಾರತಿ ಟ್ರಸ್ಟ್ ಕುಂದಾಪುರ ಸಂಸ್ಥೆಯು”ನಿಶಾಂತ್” ಕೋಟೇಶ್ವರ ಇವರ ಸಹಯೋಗದೊಂದಿಗೆ ಆಯೋಜಿಸುವ ‘ಕರ್ನಾಟಕಿ ಸಂಗೀತ’ ಕಾರ್ಯಕ್ರಮವು ದಿನಾಂಕ 23 ಮಾರ್ಚ್ 2025ರಂದು ಸಂಜೆ ಘಂಟೆ 6.00ರಿಂದ ಕುಂದಾಪುರದ ಹೋಟೆಲ್ ಪಾರಿಜಾತದಲ್ಲಿರುವ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರೀ ದೀಪಕ್ ಹೆಬ್ಬಾರ್ ಕೊಳಲು ವಾದನ, ಶ್ರೀಮತಿ ಸುನಾದಾ ಪಿ. ಎಸ್. ಮಾವೆ
ವಯೋಲಿನ್ ಹಾಗೂ ಬೆಂಗಳೂರಿನ ಶ್ರೀ ಎಸ್. ಪಿ. ನಾಗೇಂದ್ರ ಪ್ರಸಾದ್ ಮೃದಂಗದದಲ್ಲಿ ಸಹಕರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಹಿಂದುಸ್ತಾನಿ ವಿದ್ವತ್ ಅಂತಿಮ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಹೊಂದಿದ ಡಾ. ಎಚ್. ಆರ್. ಹೆಬ್ಬಾರ್ ಕುಂದಾಪುರ ಇವರಿಗೆ ಗೌರವಾರ್ಪಣೆ ನಡೆಯಲಿದೆ.