ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘ (ರಿ.) ಇದರ ವತಿಯಿಂದ ‘ಅರಿವೆಂಬುದು ಬಿಡುಗಡೆ’ 8ನೆಯ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನವನ್ನು ದಿನಾಂಕ 22 ಮತ್ತು 23 ಮಾರ್ಚ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಬೆಂಗಳೂರಿನ ಮಹಾರಾಣಿ ಕಾಲೇಜಿನ ಪಕ್ಕ ಅರಮನೆ ರಸ್ತೆ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದ ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ಆಯೋಜಿಸಲಾಗಿದೆ.
ದಿನಾಂಕ 22 ಮಾರ್ಚ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಗೀತ ಗಾಯನ. ಖ್ಯಾತ ಸ್ತ್ರೀವಾದಿ ಚಿಂತಕರಾದ ಡಾ. ಎಚ್. ಎಸ್. ಶ್ರೀಮತಿ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಮಾನ್ಯ ಮುಖ್ಯ ಮಂತ್ರಿಗಳು ಸಿದ್ಧರಾಮಯ್ಯರವರು ಈ ಸಮ್ಮೇಳನದ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ವಿಶೇಷ ಲೇಖಕಿ’, ‘ಲೇಖ ಲೋಕ -9’, ಕರ್ನಾಟಕ ಲೇಖಕಿಯರ ಸಂಘ ನಡೆದು ಬಂದ ದಾರಿಯ ಕಥನ’ ಮತ್ತು ‘ಊರ್ಮಿಳಾ’ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಕರ್ನಾಟಕ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷರುಗಳಿಗೆ ಗೌರವ ಸನ್ಮಾನ ನಡೆಯಲಿದೆ. ಶ್ರೀಷ್ಮಾ ಸುಕುಮಾರ್, ಲಕ್ಷ್ಮೀ ಶ್ರೀನಿವಾಸ್, ಲತಾ ಪ್ರಶಾಂತ್, ರಮ್ಯಾ ಸುಧೀರ್ ಮತ್ತು ಶರಣ್ಯ ಸಂಭವ್ ಇವರಿಂದ ಗೀತ ಗಾಯನ ಭಾವ ಸಂಗಮ ಪ್ರಸ್ತುತಗೊಳ್ಳಲಿದೆ. ಗೋಷ್ಠಿ -01ರಲ್ಲಿ ‘ಭಾಷೆ : ಸಾಧ್ಯತೆ ಮತ್ತು ಸವಾಲುಗಳು’ ವಿಚಾರಗೋಷ್ಠಿಯಲ್ಲಿ ಡಾ. ಸುರೇಶ್ ನಾಗಲಮಡಿಕೆ ಇವರು ‘ಸಾಹಿತ್ಯದಲ್ಲಿ ಹೆಣ್ಣು ಭಾಷೆ’, ಪ್ರೀತಿ ನಾಗರಾಜ್ ಇವರು ‘ಬಹುಮಧ್ಯಮಗಳು ಮತ್ತು ಹೆಣ್ಣುಭಾಷೆ’ ಹಾಗೂ ವಸುಧೇಂದ್ರ ಇವರು ‘ದೇಹ ಮತ್ತು ಭಾಷೆಯ ಹಂಗು – ನಡುವೆ ಸುಳಿವಾತ್ಮ’ ಎಂಬ ವಿಷಯಗಳ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ. ಹೇಮಾ ಪಟ್ಟಣಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ 01 ನಡೆಯಲಿದ್ದು, ಬಳಿಕ ಶ್ರೀಜಿತ್ ಸುಂದರಂ ಇವರ ನಿರ್ದೇಶನದಲ್ಲಿ ‘ಪಯಣ’ ರಂಗ ತಂಡದವರಿಂದ ‘ತಲ್ಕಿ’ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 23 ಮಾರ್ಚ್ 2025ರಂದು ಬೆಳಿಗ್ಗೆ 09-30 ಗಂಟೆಗೆ ವಿದುಷಿ ರಮ್ಯಾ ಸೂರಜ್ ಇವರಿಂದ ಗೀತ ಗಾಯನ. ಗೋಷ್ಠಿ -02ರಲ್ಲಿ ‘ನನ್ನ ಬದುಕು, ನನ್ನ ಆಯ್ಕೆ’ ವಿಚಾರಗೋಷ್ಠಿಯಲ್ಲಿ ಡಾ. ಬಿ.ಯು. ಸುಮಾ ಇವರು ‘ಆಧುನಿಕ ಕಾಲಘಟ್ಟದಲ್ಲಿ ಮದುವೆ ಮತ್ತು ತಾಯ್ತನದ ವಿನ್ಯಾಸಗಳು’, ಕೆ.ವೈ. ನಾರಾಯಣ ಸ್ವಾಮಿ ಇವರು ‘ಮಹಿಳೆ ಮತ್ತು ಅಧಿಕಾರ ನಿರ್ವಹಣೆ’ ಹಾಗೂ ಡಾ. ಪಿ. ಚಂದ್ರಿಕಾ ಇವರು ‘ಕೃಷಿ, ಪರಿಸರ ಮತ್ತು ಮಹಿಳೆ’ ಎಂಬ ವಿಷಯಗಳ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ. ಲಾವಣ್ಯ ಮಹಿಳಾ ತಂಡದವರಿಂದ ಡೊಳ್ಳು ಕುಣಿತ ಪ್ರಸ್ತುತಗೊಳ್ಳಲಿದೆ. ಮಧ್ಯಾಹ್ನ 12-00 ಗಂಟೆಗೆ ಗೋಷ್ಠಿ -03ರಲ್ಲಿ ‘ಆಧುನಿಕತೆ ಹಾಗೂ ಅಸ್ಮಿತೆಯ ಅನ್ವೇಷಣಾ ಕ್ರಮಗಳು’ ವಿಚಾರಗೋಷ್ಠಿಯಲ್ಲಿ ಡಾ. ಹುಲಿಕುಂಟೆ ಮೂರ್ತಿ ಇವರು ‘ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಹಾಗೂ ಮಹಿಳಾ ಬರಹಗಳು’, ಡಾ. ಸಬಿತಾ ಬನ್ನಾಡಿ ಇವರು ‘ಮಹಿಳಾ ಸಂಕಥನಗಳು ಹಾಗೂ ಹೊಸ ಹೊರಳುಗಳು’ ಹಾಗೂ ಡಾ. ಎಚ್.ಎಸ್. ಅನುಪಮಾ ಇವರು ‘ಮಹಿಳಾ ಬರಹಗಳು ಮತ್ತು ಸ್ವ ನಿರ್ವಹಣೆ’ ಎಂಬ ವಿಷಯಗಳ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ. 2-00 ಗಂಟೆಗೆ ಸಂಜ್ಯೋತಿ ವಿ.ಕೆ. ಮತ್ತು ಪೂರ್ವಿ ಕಲ್ಯಾಣಿ ಇವರಿಂದ ‘ಕಲ್ಲರಳಿ ಹೆಣ್ಣಾಗಿ’ ಕಾವ್ಯ ರೂಪಕ ಪ್ರಸ್ತುತಗೊಳ್ಳಲಿದೆ. ಚ. ಸರ್ವಮಂಗಳ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ 02 ಮತ್ತು ಸಂಜೆ 5-00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.