ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಇದರ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ‘ಮಲಬಾರ್ ವಿಶ್ವರಂಗ ಪುರಸ್ಕಾರ 2025’ ಕಾರ್ಯಕ್ರಮವನ್ನು ದಿನಾಂಕ 26 ಮಾರ್ಚ್ 2025ರಂದು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಇದರ ಉಡುಪಿ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ರಂಗ ನಟ, ಸಂಘಟಕ ಹಾಗೂ ನಿರ್ದೇಶಕ ಅರವಿಂದ ಕುಲಕರ್ಣಿ ಧಾರವಾಡ, ರಂಗ ಸಂಘಟಕ ಹಾಗೂ ನಿರ್ದೇಶಕ ಗಣೇಶ್ ಕಾರಂತ್ ಬೈಂದೂರು, ರಂಗನಟಿ ಹಾಗೂ ಕಂಠದಾನ ಕಲಾವಿದೆ ಪ್ರಿಯಾಸರೋಜಾದೇವಿ ಮುಂಬೈ, ರಂಗನಟ ಹಾಗೂ ಸಂಘಟಕ ಪ್ರಕಾಶ್ ಜಿ. ಕೊಡವೂರು, ರಂಗನಟಿ ವಿದುಷಿ ಮಂಜುಳಾ ಜನಾರ್ದನ್ ಮಂಗಳೂರು ಇವರುಗಳಿಗೆ ಗೌರವ ಪುರಸ್ಕಾರ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಕುಮಾರಿ ಸ್ವಸ್ತಿಶ್ರೀಯವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.