ಉಡುಪಿ : ರಂಗಭೂಮಿ (ರಿ.) ಉಡುಪಿ ಇದರ ವತಿಯಿಂದ ‘ವಿಶ್ವ ರಂಗಭೂಮಿ ದಿನಾಚರಣೆ 2025’ ಪ್ರಯುಕ್ತ ಪ್ರಜ್ಞಾನಂ ಟ್ರಸ್ಟ್ ಉಡುಪಿ ಪ್ರಸ್ತುತ ಪಡಿಸುವ ವಿದುಷಿ ಸಂಸ್ಕೃತಿ ಪ್ರಭಾಕರ್ ನೃತ್ಯ ಸಂಯೋಜನೆ ಮತ್ತು ಅಭಿನಯದ ಏಕವ್ಯಕ್ತಿ ನಾಟಕ ‘ಹೆಜ್ಜೆಗೊಲಿದ ಬೆಳಕು’ ಎರಡನೇ ಪ್ರದರ್ಶನವನ್ನು ದಿನಾಂಕ 27 ಮಾರ್ಚ್ 2025ರಂದು ಸಂಜೆ 6-30 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಸುಧಾ ಆಡುಕಳ ರಂಗ ಪಠ್ಯ, ಗಣೇಶ್ ರಾವ್ ಎಲ್ಲೂರು ರಂಗ ವಿನ್ಯಾಸ, ಸಂಗೀತ ಮತ್ತು ನಿರ್ದೇಶನ ಹಾಗೂ ಜಿ.ಪಿ. ಪ್ರಭಾಕರ ತುಮರಿ ಇವರು ಈ ನೃತ್ಯ ಪ್ರಸ್ತುತಿಯ ನಿರ್ಮಾಣ ಮಾಡಿರುತ್ತಾರೆ.