ತೆಂಕನಿಡಿಯೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಆಂತರಿಕ ಗುಣಮಟ್ಟ ಭರವಸಾ ಕೋಶ, ಡಾ. ಪಾದೂರು ಗುರುರಾಜ್ ಭಟ್ ಮೆಮೋರಿಯಲ್ ಟ್ರಸ್ಟ್ ಉಡುಪಿ ಹಾಗೂ ಇತಿಹಾಸ ವಿಭಾಗ ಸಂಯುಕ್ತವಾಗಿ ಆಯೋಜಿಸುತ್ತಿರುವ ಡಾ. ಪಾದೂರು ಗುರುರಾಜ್ ಭಟ್ ಜನ್ಮ ಶತಮಾನೋತ್ಸವ -2025 ಪ್ರಯುಕ್ತ ವಿಶ್ವ ವಿದ್ಯಾನಿಲಯ ಮಟ್ಟದ ಒಂದು ದಿನದ ವಿಚಾರ ಸಂಕಿರಣವನ್ನು ದಿನಾಂಕ 28 ಮಾರ್ಚ್ 2025ರಂದು ಪೂರ್ವಾಹ್ನ 10-00 ಗಂಟೆಗೆ ಕಾಲೇಜಿನ ಆಡಿಯೋ ವಿಶ್ಯುವಲ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ವಿಚಾರ ಸಂಕಿರಣವು 10-00 ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ‘ತುಳುನಾಡಿನ ದೇವಾಲಯಗಳ ವಾಸ್ತುಶಿಲ್ಪ’ ಎಂಬ ವಿಷಯದ ಬಗ್ಗೆ ಮೂಡಬಿದರೆ ಶ್ರೀ ಧವಳ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಇವರಿಂದ ಉಪನ್ಯಾಸ ನಡೆಯಲಿದೆ. ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ವಿ. ಗಾಂವಕರ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ‘ತುಳುನಾಡಿನ ಶಾಸನಗಳು’ ಎಂಬ ವಿಷಯದ ಬಗ್ಗೆ ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಬಿ. ಜಗದೀಶ್ ಶೆಟ್ಟಿ ಹಾಗೂ ‘ಮಧ್ಯಯುಗೀನ ತುಳುನಾಡಿನ ಸ್ಥಳೀಯ ಪ್ರಭುತ್ವಗಳು’ ಎಂಬ ವಿಷಯದ ಬಗ್ಗೆ ಸಹ ಪ್ರಾಧ್ಯಾಪಕರಾದ ಡಾ. ರಾಮದಾಸ್ ಪ್ರಭು ಇವರು ಉಪನ್ಯಾಸ ನೀಡಲಿದ್ದಾರೆ. ಅಪರಾಹ್ನ 3-00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.